ಬೆಂಗಳೂರು: ನಟ ವಿನೋದ್ ರಾಜ್ ಅವರು ಶುಕ್ರವಾರ ತಮ್ಮ ತೋಟದ ಸಿಬ್ಬಂಧಿಗಳಿಗೆ ಸಂಬಳ ನೀಡಲು ಬ್ಯಾಂಕ್ ನಿಂದ ಒಂದು ಲಕ್ಷ ರೂಪಾಯಿ ಹಣವನ್ನು ಡ್ರಾ ಮಾಡಿಕೊಂಡು ಬಂದು ಕಾರನ್ನು ಸಿಎನ್ ಆರ್ ಬಟ್ಟೆ ಮಳಿಗೆ ಬಳಿ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಬಂದ ಇಬ್ಬರು ಏನ್ ಸರ್ ಚೆನ್ನಾಗಿದ್ದೀರಾ ಎಂದು ಆತ್ಮೀಯತೆಯಿಂದ ಮಾತನಾಡಿಸಿದ್ದರಂತೆ. ಬಳಿಕ ಕಾರು ಪಂಚರ್ ಆಗಿದೆ ಎಂದು ಹೇಳಿ ರಿಪೇರಿ ಮಾಡುವ ನೆಪದಲ್ಲಿ ಕಾರಿನೊಳಗೆ ಇದ್ದ ಒಂದು ಲಕ್ಷ ರೂಪಾಯಿ ಹಣವನ್ನು ಕದ್ದು ಪರಾರಿಯಾಗಿದ್ದಾರೆಂದು ವಿನೋದ್ ರಾಜ್ ತಿಳಿಸಿದ್ದಾರೆ. ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.










