ಸುಪ್ರಿಂ ಕೋರ್ಟ್ ತೀರ್ಪು ಕೋಟ್ಯಾಂತರ ಭಕ್ತರನ್ನು ಹೊಂದಿರುವ ಪಂತಳ ರಾಜಕುಮಾರನಿಗೆ ಇಷ್ಟವಾಗಿದೆಯೋ ಇಲ್ಲವೋ ಎಂಬುವುದು ಅನ್ನದಾನ ಪ್ರಭು ಶ್ರೀ ಅಯ್ಯಪ್ಪನಿಗೆ ಮಾತ್ರ ಗೊತ್ತು!

1006
firstsuddi

ಸುಮಾರು ಎಂಟು ನೂರು ವರ್ಷಗಳಿಗಿಂತ ಹೆಚ್ಚು ಇತಿಹಾಸ ವಿರುವ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವ ಮೂಲಕ ಸುಪ್ರೀಂ ಕೋರ್ಟ್ ಧಾರ್ಮಿಕ ವಿಧಿ ವಿಧಾನಗಳು ಮತ್ತು ಸಂಪ್ರದಾಯಗಳಲ್ಲೂ ಸಮಾನತೆಯ ತೀರ್ಪು ತತ್ವವನ್ನು ಸಾರಿದೆ.
ಶಬರಿಮಲೆ ದೇವಾಲಯಕ್ಕೆ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಆದೇಶದ ಮೂಲಕ ಈಗ ಅನುವು ಮಾಡಿಕೊಟ್ಟಂತಾಗಿದೆ.
ಕಳೆದ ಸುಮಾರು ಎಂಟು ನೂರು ವರ್ಷಗಳಿಂದ ಕೇರಳದ ಪಂತಳಂ ಅರಮನೆಯೊಂದಿಗೆ ಸಂಬಂಧವಿರುವ ಇತಿಹಾಸ ಹೊಂದಿರುವ ಶಬರಿಮಲೆ ದೇವಸ್ಥಾನದಲ್ಲಿ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ £ಷೇಧವಿತ್ತು. ಇದೇ ಸಂಪ್ರದಾಯವನ್ನು ಪ್ರಶ್ನಾತೀತ ವಾಗಿ ನೂರಾರು ವರ್ಷಗಳಿಂ ದಲೂ ಪಾಲಿಸಿಕೊಂಡು ಬರಲಾ ಗುತ್ತಿತ್ತು. ಶಬರಿಮಲೈ ದೇವಸ್ಥಾನಕ್ಕೆ 10-50 ರೊಳಗಿನ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡ ಬೇಕೆಂಬ ಅರ್ಜಿಯ ಮೇಲಿನ ವಿಚಾರಣೆ ನಡೆಸಿದ ಸಾಂವಿ ಧಾನಿಕ ಪೀಠದಲ್ಲಿ ಮುಖ್ಯ ನ್ಯಾಯಾಧೀಶ ರಾದ ದೀಪಕ್ ಮಿಶ್ರಾ,ಆರ್. ಎಫ್.ನಾರೀ ಮನ್,ಎ.ಎಂ. ಕಾನ್ವಾಲಿಕರ್,ಡಿ.ವೈ.ಚಂದ್ರ ಚೂಡ್ ಮತ್ತು ಏಕೈಕ ಮಹಿಳಾ ನ್ಯಾಯಾಧೀಶರಾಗಿ ಜಸ್ಟಿಸ್ ಇಂಧು ಮಲ್ಹೋತ್ರ ಇದ್ದರು.
ಧಾರ್ಮಿಕ ಆಚರಣೆಗಳನ್ನು ಸಮರ್ಥಿಸಲು ಸಾಧ್ಯವಿಲ್ಲ. ಇದು ಆರಾಧಕರ ವಿಷಯ, ಧರ್ಮದ ಅಗತ್ಯ ಏನೆಂಬುವುದನ್ನು £ರ್ಧರಿಸುವ ಅಭ್ಯಾಸ ನ್ಯಾಯಾ ಲಯಗಳಿಗಿಲ್ಲವೆಂದು ವ್ಯತಿರಿಕ್ತ ತೀರ್ಪು £ೀಡಿರುವ ಮಹಿಳಾ ಜಸ್ಟಿಸ್ ಇಂಧು ಮಲ್ಹೋತ್ರ ರವರು ಪ್ರಸ್ತುತ ತೀರ್ಪು ಶಬರಿ ಮಲೆಗೆ ಸೀಮಿತವಾಗುವು ದಿಲ್ಲ. ಇನ್ನು ಆಳವಾದ ಧಾರ್ಮಿ ಕ ಮನೋಭಾವದ ವಿವಾದಗಳಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿ ಸಬಾರದು ಎಂದು ಸಾಂವಿಧಾನಿಕ ಪೀಠದ ತಿರ್ಪನ್ನು ಮಹಿಳೆಯಾ ಗಿದ್ದರೂ ಜಸ್ಟಿಸ್ ಇಂಧು ಮಲ್ಹೋತ್ರ ರವರು ವಿರೋಧಿ ಸಿದರು.
800 ವರ್ಷಗಳ ಶಬರಿ ಮಲೈ ದೇವಸ್ಥಾನದಲ್ಲಿ ನಡೆದು ಕೊಂಡು ಬಂದ ಸಂಪ್ರದಾಯ ಮತ್ತು ಪದ್ದತಿಗೆ ತೆರೆ ಎಳೆಯುವ ಸುಪ್ರೀಂ ಕೋರ್ಟ್ ತೀರ್ಪಿ£ಂದ 10-50 ವರ್ಷದೊಳಗಿನ ಮಹಿಳೆಯರು ಯಾವುದೇ ಕಟ್ಟು ಪಾಡುಗಳಿಲ್ಲದೆ ಪ್ರವೇಶಿಸಲು ಅವಕಾಶ ದೊರೆತಂತಾಗಿದೆ.
ಎಲ್ಲಾ ವಯೋಮಾನದ ಮಹಿಳೆಯರು ಸೇರಿದಂತೆ ಭಕ್ತರು ಸಮಾನರು ಎಂದು ಪೀಠ ಅಭಿಪ್ರಾಯಿಸಿದೆ.
ದೇವಸ್ಥಾನಗಳ ಪೂಜೆ, ವಿಧಿವಿಧಾನಗಳು, ಸಂಪ್ರದಾಯ ಗಳು ಪ್ರಾಂತ್ಯ,ಗ್ರಾಮ,ರಾಜ್ಯ ಹಾಗೂ ದೇಶವಾರು ವಿಭಿನ್ನವಾ ಗಿರುತ್ತದೆ. ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುವುದು ಎಲ್ಲರ ಕರ್ತವ್ಯ. ಆದರೆ, ಸಂಪ್ರ ದಾಯಗಳನ್ನು ಮುರಿಯುವುದು ಕಷ್ಟಸಾಧ್ಯದ ಕೆಲಸ ಎಂದು ಕೇರಳದ ಹಲವು ಧಾರ್ಮಿಕ ಮುಖಂಡರುಗಳು ತಿಳಿಸಿದ್ದಾರೆ ಹಾಗೂ ಐವರು ಸಾಂವಿಧಾ£ಕ ಪೀಠದ ತೀರ್ಪನ್ನು ಅಧ್ಯಯನ ಮಾಡಿ ಪುನರ್ ಪರಿಶೀಲನೆಗೆ ಅವಕಾಶ ಇದೆಯೇ ಎಂಬು ವುದರ ಬಗ್ಗೆ ಚಿಂತನೆ ನಡೆಸಲು ಹಲವು ಹಿಂದೂಪರ ಸಂಘಟನೆ ಗಳು ಮುಂದಾಗಿವೆ.
ಐತಿಹಾಸಿಕ ತೀರ್ಪು ನೀಡಿರುವ ಸವೋಚ್ಛ ನ್ಯಾಯಾಲಯವು ಪೂಜೆಯ ಹಕ್ಕು ಎಲ್ಲಾ ಭಕ್ತರಿಗೂ ಇದೆ. ಲಿಂಗ ತಾರತಮ್ಯ ಸಲ್ಲದು ಎಂದು ತಿಳಿಸಿದೆ. ಒಂದು ವಯೋಮಾನದ ಮಹಿಳೆಯರಿಗೆ ದೇವಸ್ಥಾನದ ಪ್ರವೇಶ £ಷೇಧಿಸಿದರೆ ಅದು ಸಾಂವಿಧಾನಿಕ ತತ್ವಗಳ ಉಲ್ಲಂಘನೆಯಾಗುತ್ತದೆ. ಶಬರಿಮಲೈ ದೇವಸ್ಥಾನದ ಈ ಸಂಪ್ರದಾಯಕ್ಕೆ ಸಂವಿಧಾನದ ಬೆಂಬಲವಿಲ್ಲ ಎಂದು ನ್ಯಾಯ ಮೂರ್ತಿ ನಾರಿಮನ್ ಅಭಿಪ್ರಾ ಯಿಸಿದ್ದಾರೆ.
ಭಕ್ತಿ ಮತ್ತು ಆರಾಧನೆ ಎಂಬುವುದು ಲಿಂಗ ತಾರತಮ್ಯಕ್ಕೆ ಒಳಪಡುವಂತದಲ್ಲ ಎಂದು ಮುಖ್ಯ ನ್ಯಾಯಾದೀಶರಾದ ದೀಪಕ್ ಮಿಶ್ರಾ ಹಾಗೂ ನ್ಯಾಯಾಧೀಶ ಕಾ£್ವಲ್‍ಕರ್ ಅಭಿಪ್ರಾಯಿಸಿದರು.
ದೈಹಿಕ ವ್ಯತ್ಯಾಸಗಳ ಕಾರಣ ಗಳೊಡ್ಡಿ ಮಹಿಳೆಯರನ್ನು ದೂರ ವಿಡುವುದು ಹಾಗೂ ಅವರ ಹಕ್ಕನ್ನು ಕಸಿಯಲು ಸಾಧ್ಯವಿಲ್ಲ. ಅಯ್ಯಪ್ಪ ಸ್ವಾಮಿಯ ಭಕ್ತರು ಎಂಬ ಕಾರಣಕ್ಕೆ ಅವರನ್ನು ಪ್ರತ್ಯೇಕ ಗುಂಪಾಗಿ ಪರಿಗಣಿಸಲು ಸಾಧ್ಯ ವಿಲ್ಲ.
ಮಹಿಳೆಯರ ದೈಹಿಕ ವ್ಯತ್ಯಾಸಗಳನ್ನಾಧರಿಸಿ ಅವರ ಘನತೆಗೆ, ಧರ್ಮಾಚರಣೆಯ ಹಕ್ಕಿಗೆ ಕುತ್ತು ತರುವಂತಿಲ್ಲ ಎಂದು ಮಹಿಳೆಯರ ಪ್ರವೇಶಕ್ಕೆ ಹೇರಿರುವ ನಿರ್ಭಂಧವನ್ನು ತೆರವುಗೊಳಿಸುವ ಬಗ್ಗೆ ಇತರೆ ನ್ಯಾಯಾಧೀಶರುಗಳು ತೀರ್ಪು ಪ್ರಕಟಿಸಿದರೆ ಜಸ್ಟಿಸ್ ಇಂಧು ಮಲ್ಹೋತ್ರ ಈ ತೀರ್ಪಿ£ಂದ ಶಬರಿಮಲೈಗೆ ಮಾತ್ರವಲ್ಲದೆ ವ್ಯಾಪಕ ಪರಿಣಾಮಗಳನ್ನು ಉಂಟು ಮಾಡಲಿದೆ ಎಂದು ತಿಳಿಸಿ,ಈ ವಿವಾಧ ಧಾರ್ಮಿ ಕತೆಯ ಆಳವನ್ನೇ ಪ್ರಶ್ನಿಸಿದೆ ಎಂದರು.
ದೇಶದ ಜ್ಯಾತ್ಯಾತೀತ ವಾತಾವರಣದ ಪಾಲನೆಗಾಗಿ ಆಳವಾಗಿ ಬೇರೂರಿರುವ ಧಾರ್ಮಿಕ ಆಚರಣೆಗಳನ್ನು ಹಾಳುಗೆಡವಬಾರದು ಎಂದು ಜಸ್ಟಿಸ್ ಇಂಧು ಮಲ್ಹೋತ್ರ ಪ್ರತಿ ಪಾದಿಸಿ ವ್ಯತಿರಿಕ್ತ ತೀರ್ಪಿನಿಂದ ಸಮಾನತೆಯ ಹಕ್ಕು ಧಾರ್ಮಿಕ ಆಚರಣೆ ಹಾಗೂ ಮೂಲಭೂತ ಹಕ್ಕಿನ ಸಂಘರ್ಷಕ್ಕೆ ಕಾರಣವಾ ಗುತ್ತದೆ ಎಂದು ಅಭಿಪ್ರಾಯಿಸಿ ದ್ದಾರೆ.
ಹಲವು ರೀತಿಯ ಆಚಾರ ವಿಚಾರಗಳು ನಂಬಿಕೆಗಳ ಅಂಶ ಗಳ ಮೇಲೆ ನಿಂತಿದ್ದ ಶಬರಿಮಲೈ ಶ್ರೀ ಅಯ್ಯಪ್ಪ ದೇವಸ್ಥಾನದ ಸಂಪ್ರದಾಯ ಮುರಿಯುವ ಹಂತ ತಲುಪಿದ್ದು,ಸುಪ್ರೀಂ ತೀರ್ಪಿನಂತೆ 10-50 ವಯೋಮಾನದ ಮಹಿಳೆಯರಿಗೆ ಮಣಿಕಂಠನ ದರ್ಶನಕ್ಕೆ ಕೇರಳದ ತಿರುವಿತಾಂ ಕೂರು ದೇವಸಂ ಬೋರ್ಡ್ ಅವಕಾಶ ಮಾಡಿಕೊಡಬೇಕಾಗಿ ಬಂದಿದೆ.
ಈ ವಯೋಮಾನದ ಮಹಿಳೆಯರು ದೇವಸ್ಥಾನ ಪ್ರವೇಶಿಸುವುದನ್ನು ದೈಹಿಕ ಏರು ಪೇರುಗಳು ಹಾಗೂ ಇ£್ನತರೆ ಕಾರಣಗಳಿಂದ ಕಳೆದ 800 ವರ್ಷಗಳಿಂದ ನಿಷೇಧಿಸಲಾಗಿದ್ದು, ಈ ವಯೋಮಾನ ಹೊರತುಪಡಿಸಿ, ಪ್ರತಿ ವರ್ಷವೂ ಲಕ್ಷಾಂತರ ಮಹಿಳಾ ಭಕ್ತರು ಶಬರಿಮಲೆಗೆ ತೆರಳಿ ಕರ್ಪೂರ ಪ್ರಿಯನಾದ ಅಯ್ಯಪ್ಪನ ದರ್ಶನ ಪಡೆಯುತ್ತಾ ಬಂದಿದ್ದರು.
10-50 ವಯೋಮಾನದ ಮಹಿಳೆಯರಿಗೆ ಮಣಿಕಂಠನ ದರ್ಶನಕ್ಕೆ ಸಂಪ್ರದಾಯವನ್ನು ಮುರಿದು ಅನುಮತಿ ನೀಡ ಬೇಕೆಂಬ ವಾದಕ್ಕೆ ಮೂಲತಃ ಕೇರಳ ಸೇರಿದಂತೆ ಹಲವು ರಾಜ್ಯ ಗಳ ಮಹಿಳೆಯರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದ್ದು, ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಇಂಧು ಮಲ್ಹೋತ್ರ ರವರು ಇದೇ ರೀತಿಯ ಅಭಿಪ್ರಾಯ ವ್ಯಕ್ತಪ ಡಿಸಿರುವುದು ಕಾಕತಾಳಿಯ ವಾಗಿದೆ.
ಒಟ್ಟಾರೆ ಮುಂದಿನ ದಿನ ಗಳಲ್ಲಿ 48 ದಿನಗಳ ವ್ರತಾನು ಷ್ಠಾನಗಳನ್ನು ಆಚರಿಸಿ, 10-50 ವರ್ಷದ ಮಹಿಳೆಯರು ಮಣಿ ಕಂಠನ ದರ್ಶನಕ್ಕೆ ಹೇಗೆ ತೆರಳುತ್ತಾರೆ ಎಂಬುವುದು ತೀವ್ರ ಕುತೂಹಲದ ವಿಷಯವಾ ಗಲಿದ್ದು,ವ್ರತಾನುಷ್ಠಾನಗಳ ಸಾಂಪ್ರದಾಯಿಕ £ಯಮಗಳನ್ನೇ ಇನ್ನು ಮುಂದೆ ಬದಲಾಯಿಸುವ ಪರಿಸ್ಥಿತಿ £ರ್ಮಾಣವಾಗಿದೆ.
ಮಹಿಳೆಯರು ಋತು ಚಕ್ರದ ಸಂದರ್ಭದಲ್ಲೂ ಶಬರಿಮಲೆಗೆ ಇರುಮುಡಿ ಹೊತ್ತು 18 ಮೆಟ್ಟಿಲು ಹತ್ತಿ ಕರ್ಪೂರ ಪ್ರಿಯನ ದರ್ಶನ ಪಡೆಯುವ ದಿನಗಳು ದೂರವಲ್ವಾ? ಎಂಬ -ಪ್ರಶ್ನೆ ಧರ್ಮ ಶಾಸ್ತಾ ಭಕ್ತರನ್ನು ಕಾಡುತ್ತಿದೆ.
ಸುಪ್ರಿಂ ಕೋರ್ಟ್ ತೀರ್ಪು ಕೋಟ್ಯಾಂತರ ಭಕ್ತರನ್ನು ಹೊಂದಿರುವ ಪಂತಳ ರಾಜಕುಮಾರ, ಶಬಿರೀನಾಥ,ಪಂಪಾವಾಸ, ಭಕ್ತವತ್ಸಲನಿಗೆ ಇಷ್ಟವಾಗಿದೆಯೋ ಇಲ್ಲವೋ ಎಂಬುವುದು ಆ ಅನ್ನದಾನ ಪ್ರಭು ಶ್ರೀ ಅಯ್ಯಪ್ಪನಿಗೆ ಮಾತ್ರ ಗೊತ್ತು!