ಪ್ರೇಯಸಿಗಾಗಿ ಕಿತ್ತಾಡಿಕೊಂಡು ಇಬ್ಬರು ವಿದ್ಯಾರ್ಥಿಗಳ ಸಾವು…

458
firstsuddi

ಹೈದರಾಬಾದ್: ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಹತ್ತನೇ ತರಗತಿಯ ಇಬ್ಬರು ಹುಡುಗರು ಮದ್ಯ ಸೇವಿಸಿ ಪರಸ್ಪರ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿಸುವ ಘಟನೆ ತೆಲಂಗಾಣದ ಜಗ್ತಿಯಾಲ್ ನಗರದಲ್ಲಿ ನಡೆದಿದೆ. ಕೆ ಮಹೇಂದರ್ ಹಾಗೂ ರವಿ ತೇಜಾ ಇಬ್ಬರೂ ವಿದ್ಯಾರ್ಥಿಗಳು ಮಿಷನರಿ ಸ್ಕೂಲ್ ನಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದು, ಅದೇ ಶಾಲೆಯ ಹುಡುಗಿಯೊಬ್ಬಳನ್ನು ಇಬ್ಬರೂ ಪ್ರೀತಿಸುತ್ತಿದ್ದರು. ಭಾನುವಾರ ರಾತ್ರಿ ಕೆ. ಮಹೇಂದರ್ ಹಾಗೂ ರವಿ ತೇಜಾ ಇಬ್ಬರೂ ಮದ್ಯ ಸೇವಿಸಿ ಹುಡುಗಿಯ ವಿಚಾರಕ್ಕೆ ಜಗಳ ಮಾಡಿಕೊಂಡು ಪೆಟ್ರೋಲ್ ಸುರಿದುಕೊಂಡು ಪರಸ್ಪರ ಬೆಂಕಿ ಹಚ್ಚಿಕೊಂಡು ಇಬ್ಬರು ಮೃತಪಟ್ಟಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.