ಅಕ್ಟೋಬರ್ 3ರಿಂದ ಶಿರಾಡಿ ಘಾಟ್ ರಸ್ತೆ ಬಸ್ ಸಂಚಾರಕ್ಕೆ ಮುಕ್ತ: ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್…

614
firstsuddi

ಮಂಗಳೂರು: ಅಕ್ಟೋಬರ್ 3ರಿಂದ ಶಿರಾಡಿ ಘಾಟ್ ರಸ್ತೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿ ಕಾಂತ್ ಸೆಂಥೆಲ್ ತಿಳಿಸಿದ್ದಾರೆ.ಅಧಿಕ ಮಳೆಯಿಂದ 12 ಕಡೆ ಕುಸಿತಗೊಂಡಿದ್ದು, ಈಗ 8 ಕಡೆ ರಸ್ತೆಯನ್ನು ಸರಿಪಡಿಸಿದ್ದು, ಅಪಾಯದ ಸಾಧ್ಯತೆ ಇರುವ ಇನ್ನುಳಿದ 4 ಕಡೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಹಾಸನದ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದ್ದು, 15 ದಿನಗಳ ಬಳಿಕ ಪರಿಸ್ಥಿತಿ ಗಮನಿಸಿ ಘನ ವಾಹನಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ತಿರ್ಮಾನಿಸಲಾಗುವುದು ಎಂದಿದ್ದಾರೆ.