ಶ್ರೀನಗರ : ಗಡಿಯಲ್ಲಿ ಕಾರ್ಯಚರಣೆ ವೇಳೆ ಭದ್ರತಾ ಪಡೆಗಳು ಓರ್ವ ಉಗ್ರನನ್ನು ಬಂಧಿಸಿದ್ದಾರೆ. ಬಂಧಿತ ಉಗ್ರನನ್ನು ತಾರಿಕ್ ಅಹಮ್ಮದ್ ಭಟ್ ಎಂದು ಗುರುತಿಸಲಾಗಿದೆ. ಶ್ರೀನಗರದ ಬದ್ಗಾಮ್ ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಜಮ್ಮು ಕಾಶ್ಮೀರಾ ಪೊಲೀಸರು ಹಾಗೂ ಭದ್ರತಾ ಪಡೆಗಳು ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಓರ್ವ ಉಗ್ರನನ್ನು ಬಂಧಿಸಿದ್ದು, ಬಂಧಿತನಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಲದೇ ನಿನ್ನೆ ರಾತ್ರಿ ಜಮ್ಮು-ಕಾಶ್ಮೀರಾದ ಆರ್.ಎಸ್. ಪುರಾ ಸೆಕ್ಟರ್ ನ ಅಂತರಾಷ್ಟ್ರೀಯ ಗಡಿ ರೇಖೆಯಲ್ಲಿ ಅನುಮಾನಸ್ಪಾದವಾಗಿ ಡ್ರೋನ್ ಚಾಲನೆ ಕಂಡು ಬಂದಿದ್ದು, ಕೂಡಲೇ ಭದ್ರತಾ ಪಡೆಗಳು ಡ್ರೋನ್ ಮೇಲ್ ಗುಮಡು ಹಾರಿಸುತ್ತಿದ್ದಂತೆ ಡ್ರೋನ್ ಹಿಂದುರಿಗಿದೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.










