ಸಕಲೇಶಪುರ: ಶಿರಾಡಿ ಘಾಟ್ ಬಸ್ -ಕಾರು ಮುಖಾಮುಖಿ ಢಿಕ್ಕಿ ನಾಲ್ವರ ಸಾವು…

150
ಸಕಲೇಶಪುರ- ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಹಾಗೂ ವಿರುದ್ಧ ದಿಕ್ಕಿನಿಂದ ಆಗಮಿಸುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ಮಧ್ಯೆ ಸಕಲೇಶಪುರ ಠಾಣೆ ವ್ಯಾಪ್ತಿಯ ಶಿರಾಡಿ ಘಾಟ್ ಪ್ರದೇಶದಲ್ಲಿ ಮುಖಾಮುಖಿ ಢಿಕ್ಕಿ  ಸಂಭವಿಸಿದ್ದು . ನಾಲ್ಕು ವರ್ಷದ ಮಗು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಮೊಬೈಲ್ ಸಂಪರ್ಕ ಇಲ್ಲದೆ ಇದ್ದುದರಿಂದ ಅಪಘಾತಕ್ಕೆ ಒಳಗಾದವರ ಜೀವ ಉಳಿಸಲು ಜನರು ಹರ ಸಾಹಸಪಟ್ಟರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.