ಕೆಎಸ್‌ಆರ್‌ಟಿಸಿ ಬಸ್-ಕಾರು ಡಿಕ್ಕಿ: ಸ್ಥಳದಲ್ಲೇ ಮೂವರ ದುರ್ಮರಣ…

143
firstsuddi

ಹಾಸನ:  ಕೆಎಸ್‌ಆರ್‌ಟಿಸಿ ಬಸ್ ಹಾಗೂ ಮಾರುತಿ ಓಮ್ನಿ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ಅರಸೀಕೆರೆ ತಾಲೂಕಿನ ಲಕ್ಷ್ಮೀದೇವರಹಳ್ಳಿಯಲ್ಲಿ ನಡೆದಿದೆ.ಮುಜೀಬ್ (53), ಮಹಮದ್ ಸಾದಿಕ್ (22), ಮುಸ್ಕಾನ್ (19) ಮೃತ ದುರ್ದೈವಿಗಳು. ಶಲೀನಾ ಬಾನು, ಇಮ್ರಾನ್ ಅಹಮದ್, ಶಲೀನಾ ತಾಜ್ ಮತ್ತು ಮಹಮದ್ ಶಲೀನಾ ಗಾಯಗೊಂಡಿದ್ದು, ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.