ತರೀಕೆರೆ :ಜಮೀನಿಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಬೆಳೆ ನಾಶ…

240

ಚಿಕ್ಕಮಗಳೂರು : ಜಮೀನಿಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಬೆಳೆ ನಾಶವಾಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಸಮೀಪ ಅರಸೀಕೆರೆ ಗ್ರಾಮದಲ್ಲಿ ನಡೆದಿದೆ. ಲಕ್ಕವಳ್ಳಿ ವಲಯಕ್ಕೆ ಸೇರಿದ ಅರಣ್ಯ ಪ್ರದೇಶದಲ್ಲಿ ಹೊತ್ತಿದ್ದ ಬೆಂಕಿ ಜಯಣ್ಣ ಹಾಗೂ ವಿಶುಕುಮಾರ್ ಎಂಬುವವರಿಗೆ ಸೇರಿದ ಜಮೀನಿಗೂ ಆವರಿಸಿದ್ದು, ಜಮೀನಿನಲ್ಲಿದ್ದ 50 ಅಡಿಕೆ ಗಿಡ, ಸಿಲ್ವರ್, ಹೆಬ್ಬೇವು ಗಿಡಗಳು ಹಾಗೂ ಕೊಟ್ಟಿಗೆಯಲ್ಲಿದ್ದ ಸೋಲಾರ್ ಸಿಸ್ಟಮ್, ಪಿವಿಸಿ ಪೈಪ್‍ಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದಾವಿಸಿ ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ತೊಡಗಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.