ಬೆಂಗಳೂರು: ಜಿಮ್ ಟ್ರೈನರ್ ಮಾರುತಿಗೌಡ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ನಟ ದುನಿಯಾ ವಿಜಯ್ ಮತ್ತು ತಂಡದ ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರ ಮ್ಯಾಜಿಸ್ಟ್ರೇಟ್ ಕೋರ್ಟ್ ತನ್ನ ಆದೇಶವನ್ನು ಸೆಪ್ಟೆಂಬರ್ 26ಕ್ಕೆ ಕಾಯ್ದಿರಿಸಿತ್ತು. 8ನೇ ಎಸಿಎಂಎಂ ನ್ಯಾಯಾಲಯ ಇಂದು ಅರ್ಜಿ ತಿರಸ್ಕರಿಸಿದೆ ಇದರಿಂದ ವಿಜಯ್ ಮತ್ತು ತಂಡ ಪರಪ್ಪನ ಅಗ್ರಹಾರದ ಜೈಲಲ್ಲಿ ಮತ್ತಷ್ಟು ದಿನ ಇರುವಂತಾಗಿದೆ.










