ಕೃಷಿ ಮಾರ್ಗದರ್ಶಕ ನಾಡೋಜ ಎಲ್​​ ನಾರಾಯಣರೆಡ್ಡಿ ಇನ್ನಿಲ್ಲ…

278
firstsuddi

ಬೆಂಗಳೂರು:  ಸಾವಯವ ಕೃಷಿಕ ಮತ್ತು ಸಾವಯವ ಕೃಷಿ ಮಾರ್ಗದರ್ಶಕ ನಾಡೋಜ ಎಲ್​. ನಾರಾಯಣರೆಡ್ಡಿ (80) ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳೀಯಲ್ಲಿ ನಿಧನರಾಗಿದ್ದಾರೆ. ನಾಡೋಜ ಎಲ್​. ನಾರಾಯಣರೆಡ್ಡಿ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸಂತಾಪ  ಸೂಚಿಸಿದ್ದು, ಸಾವಯವ ಕೃಷಿಗೆ ಹೊಸ ತಿರುವು ನೀಡಿದ, ಅಪಾರ ಕೃಷಿ ಜ್ಞಾನ ಹೊಂದಿದ್ದ ಸರಳ, ಸಜ್ಜನ ನಾಡೋಜ ಎಲ್ ನಾರಾಯಣ ರೆಡ್ಡಿ ಅವರ ನಿಧನದ ಸುದ್ದಿ ತಿಳಿದು ನನಗೆ ಅಪಾರ ದುಃಖವಾಗಿದೆ.  ಫುಕುವೋಕಾ ಅವರ ಕೃಷಿ ಪದ್ಧತಿಯಿಂದ ಪ್ರೇರೇಪಿತರಾಗಿ ಅದನ್ನು ರಾಜ್ಯದ ಎಲ್ಲೆಡೆ ಅಳವಡಿಸಲು ಅವರು ತಮ್ಮ ಬದುಕಿನುದ್ದಕ್ಕೂ ಶ್ರಮಿಸಿದ್ದರು  ಎಂದು ಟ್ವಿಟ್ ಮೂಲಕ ಸಂತಾಪ  ಸೂಚಿಸಿದ್ದಾರೆ.