ಬಿಜೆಪಿಯವರ ಯಾವ ಪ್ರಯತ್ನವೂ ಸಫಲವಾಗುವುದಿಲ್ಲ:ಸಿ ಎಂ ಕುಮಾರಸ್ವಾಮಿ…

394
firstsuddi

ಮೈಸೂರು: ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು  ಬಿಜೆಪಿಯವರು ಶಾಸಕರಿಗೆ ಯಾವ ಯಾವ ಆಮಿಷ ಒಡ್ಡುತ್ತಿದ್ದಾರೆಂದು ನನಗೆ ಗೊತ್ತಿದೆ. ನಾನು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಬಿಜೆಪಿಯವರ ಯಾವ ಪ್ರಯತ್ನವೂ ಸಫಲವಾಗುವುದಿಲ್ಲ. ದೆಹಲಿ ಹಾಗೂ ಮುಂಬೈ ಯಲ್ಲಿರುವ ಶಾಸಕರು ತಮ್ಮ ಸ್ನೇಹಿತರೇ ಆಗಿದ್ದಾರೆ. ಮುಂಬೈಗೆ ಹೋಗಿರುವ ಶಾಸಕರು ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಅವರು ನನಗೆ ಹೇಳಿಯೇ ಹೋಗಿದ್ದಾರೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದಿದ್ದಾರೆ.