ಅರುಣ್ ಜೇಟ್ಲಿ ಕೂಡಲೇ ರಾಜೀನಾಮೆ ನೀಡಲಿ.- ರಾಹುಲ್ ಗಾಂಧಿ …

275
firstsuddi

ನವದೆಹಲಿ: ನಾನು ದೇಶ ತೊರೆಯುವ ಮುನ್ನ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿದ್ದೆ ಎಂದು ಭಾರತದ ಬ್ಯಾಂಕ್ ಗಳಿಗೆ 9 ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡು ಲಂಡನ್ ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಹೇಳಿಕೆ ನೀಡಿದ ಹಿನ್ನಲೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದು, ಸಚಿವ ಅರುಣ್ ಜೇಟ್ಲಿ ಹಾಗೂ  ಮಲ್ಯ ನಡುವೆ ಒಳಒಪ್ಪಂದ ನಡೆದಿದೆ ಎಂದು ಆರೋಪಿಸಿದ್ದು, ಜೇಟ್ಲಿ ಅವರ ರಾಜೀನಾಮೆಗೆ ಆಗ್ರಹಿಸಿರುವ ರಾಹುಲ್ ಗಾಂಧಿ ಇದೊಂದು ಒಳಸಂಚು ಎಂದು ಸ್ಪಷ್ಟವಾಗಿ ಕಾಣುತ್ತಿದೆ. ಅವರಿಬ್ಬರ ನಡುವೆ ಕೆಲವು ಒಪ್ಪಂದಗಳು ನಡೆದಿದೆ. ಕೂಡಲೇ ಜೇಟ್ಲಿ ಅವರು ರಾಜಿನಾಮೆ ನೀಡಬೇಕು. ಈ ಸಂಬಂಧ ತನಿಖೆ ನಡೆಯಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.