ಬೆಂಗಳೂರು: ಹಾಸನದ ಶಾಸಕ ಪ್ರೀತಂಗೌಡ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟ್ ಮಾಡಿರುವ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಹಾಸನದಲ್ಲಿ ಶಾಸಕರ ಮನೆಯ ಮೇಲೆ ನಡೆದ ದಾಳಿ ಖಂಡನಾರ್ಹ. ಯಾರೇ ಈ ಕೃತ್ಯ ನಡೆಸಿದರೂ ಅದು ಸರಿಯಲ್ಲ. ಅವರ ಮೇಲೆ ಪೊಲೀಸರು ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಲಿದ್ದಾರೆ. ರಾಜಕೀಯವಾಗಿ ಏನೇ ಬೆಳವಣಿಗೆಗಳಾದರೂ ಯಾವುದೇ ಪಕ್ಷದ ಕಾರ್ಯಕರ್ತರಾಗಲಿ ದಾಳಿ ಮಾಡುವ ಮಟ್ಟಕ್ಕೆ ಇಳಿಯಬಾರದು. ನಮ್ಮ ಸಂಯಮ, ಸಂಸ್ಕೃತಿ ಮೀರಿ ಹೋಗಬಾರದು ಎಂದು ಟ್ವಿಟ್ ಮಾಡಿದ್ದಾರೆ.










