ಚಿಕ್ಕಮಗಳೂರು : ಶೃಂಗೇರಿ ಶಾರದಾಂಭೆ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಈ ಬಾರಿ ದೇಶಾದ್ಯಂತ ಮೋದಿ ಅಲೆ ಇದೆ. ಕಳೆದ ಬಾರಿಗಿಂತ 10-12 ಪರ್ಸೆಂಟ್ ಜಾಸ್ತಿ ವೋಟ್ ಬರುತ್ತೆ. ಎಲ್ಲಾ ಸರ್ವೇಗಳಲ್ಲೂ ಮೋದಿಯೇ ಪ್ರಧಾನಿ ಎಂದು ಬಂದಿದೆ . ರಾಜ್ಯದಲ್ಲಿ 22 ಸೀಟ್ ಗೆದ್ದೇ ಗೆಲ್ತೇವೆ. 17ನೇ ತಾರೀಖು ಕೋರ್ ಕಮಿಟಿ ಸಭೆ ನಡೆಯಲ್ಲಿದ್ದು, 18ನೇ ತಾರೀಖು ಅಭ್ಯರ್ಥಿಗಳ ಘೋಷಣೆ ಮಾಡಲಿದ್ದೇವೆ. ಮಂಡ್ಯದಲ್ಲಿ ಇಲ್ಲಿವರೆಗೆ ನಿರ್ಧಾರ ಮಾಡಿಲ್ಲ. ಅಂಬರೀಶ್ ಬಗ್ಗೆ ಕುಮಾರಸ್ವಾಮಿಗೆ ಅಭಿಮಾನವಿತ್ತು. ಅವ್ರು ಸತ್ತ ಬಳಿಕ ಅಂಬರೀಶ್ ಕೊಡುಗೆ ಏನು ಎಂದಿದ್ದಾರೆ. ಇದು ಸಿಎಂಗೆ ಶೋಭೆ ತರುವಂತದ್ದಲ್ಲ. ಸಿಎಂ ಅಂಬರೀಶ್ ಗೆ ಅಪಮಾನ ಮಾಡುವಷ್ಟು ಕೆಳಗಿಳಿದಿದ್ದಾರೆ. ಮಂಡ್ಯ ಜನ ಆಕ್ರೋಶಗೊಂಡಿದ್ದಾರೆ, ವಾತಾವರಣ ಬೇರೆ ಇದೆ. ಸುಮಲತಾ ನಿರ್ಧಾರ ನೋಡಿ ನಮ್ಮ ನಿರ್ಧಾರ ಪ್ರಕಟ ಮಾಡುತ್ತೇವೆ ಎಂದರು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಇದು ಮುಖಂಡರ ಮೈತ್ರಿ ಕಾರ್ಯಕರ್ತರದ್ದಲ್ಲ. ಎಲ್ಲೇ ಹೋದ್ರು ಬಡಿದಾಟ, ಕಚ್ಚಾಟ, ಕಿತ್ತಾಟ ಕಾಮನ್ ಎಂದಿದ್ದಾರೆ. ದೇವೇಗೌಡ ಕಣ್ಣೀರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು ಮೊಮ್ಮಗನಿಗೆ ಟಿಕೆಟ್ ಕೊಟ್ಟು ಮನೆಮಂದಿಯಲ್ಲಾ ಕಣ್ಣೀರಾಗ್ತಾರೆ. ಈ ಕಣ್ಣೀರಿಗೆ ಅರ್ಥ ಇದ್ಯಾ. ಜನರಿಗೆ ಮರುಳು ಮಾಡುವ ವ್ಯವಸ್ಥಿತ ಷಡ್ಯಂತ್ರ ಎಂದು ಹೇಳಿದ್ದಾರೆ.










