ಹಿಂದುಳಿದ ವರ್ಗಗಳು ಶಿಕ್ಷಣವಂತರಾದರೆ ಒಗ್ಗೂಡಿ ಸಂಘಟಿತರಾದರೆ ಏನನ್ನು ಬೇಕಾದರೂ ಸಾಧಿಸಬಹುದು: ಗಾಯತ್ರಿ ಶಾಂತೇಗೌಡ…

450
firstsuddi

ಚಿಕ್ಕಮಗಳೂರು: ಹಿಂದುಳಿದ ವರ್ಗಗಳ ಜನ ತಮ್ಮ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗೂಡಿದರೆ ಮಾತ್ರ ಆ ಸಮುದಾಯಗಳ ಅಭಿವೃದ್ದಿಯಾಗುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಹೇಳಿದರು.
ಜಿಲ್ಲಾ ನಾರಾಯಣಗುರು ಸಮಿತಿ ನಗರದ ಉಪ್ಪಳ್ಳಿಯ ಬಸವರಾಜ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳು ಶಿಕ್ಷಣವಂತರಾದರೆ ಒಗ್ಗೂಡಿ ಸಂಘಟಿತರಾದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದ ಅವರು ತಳ ಸಮುದಾಯಗಳು ಇದನ್ನು ಅರಿತು ರಾಜಕೀಯವಾಗಿ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.
ಈ ಸಮುದಾಯ ಭವನದ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ 25 ಲಕ್ಷ ರೂ ಅನುದಾನ ನೀಡಿದೆ ಎಂದ ಅವರು ಈಗಿನ ಮೈತ್ರಿ ಸರ್ಕಾರ ಮತ್ತು ರಾಜ್ಯ ಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರೊಂಂದಿಗೆ ಚರ್ಚಿಸಿ ಇನ್ನೂ ಹೆಚ್ಚಿನ ಹಣ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್ ಮಾತನಾಡಿ ಸಮುದಾಯ ಭವನಕ್ಕೆ ರಸ್ತೆ ಮತ್ತು ಬೀದಿ ದೀಪ ಒದಗಿಸಿ ಕೊಡುವ ಭರವಸೆ ನೀಡಿದರು.
ಜಿ.ಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ಹಿಂದುಳಿದ ವರ್ಗಗಳ ಜನ ಎಲ್ಲದಕ್ಕೂ ಸರ್ಕಾರವನ್ನೇ ಆಶ್ರಯಿಸದೆ ಸ್ವಸಾಮಥ್ರ್ಯದಿಂದ ಅಭಿವೃದ್ದಿ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರು ಒಕ್ಕೂಟದ ಜಿಲ್ಲಾಧ್ಯಕ್ಷ ಹೆಚ್.ಎಂ.ಸತೀಶ್, ಜಿಲ್ಲಾ ನಾರಾಯಣ ಗುರು ಸಮಿತಿಯ ಅಧ್ಯಕ್ಷ ದಾಸರಹಳ್ಳಿ ಎಂ.ಕೃಷ್ಣಪ್ಪ, ಸ್ಥಾಪಕ ಅಧ್ಯಕ್ಷ ಕೆ.ಸಿ.ಶಾಂತಕುಮಾರ್, ಗೌರವಾಧ್ಯಕ್ಷರಾದ ಕೆ.ಎಂ.ಗುಣಶೇಖರ್, ಬಿ.ಕುಂಜಪ್ಪ, ಸಿ.ಮಾಧವನ್, ಉಪಾಧ್ಯಕ್ಷರಾದ ಸಿ.ಆರ್.ಕುಮಾರ್, ಎಲ್.ಸಿ.ಚಂದ್ರು, ಕೆ.ಅಯ್ಯಪ್ಪ, ಎಂ.ರಾಜು, ಎನ್.ಜಗಧೀಶ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಮಾಯಪ್ಪನ್ ಹಾಜರಿದ್ದರು.