ಪ್ರಸಾದ ಸೇವಿಸಿ 11 ಜನರ ದುರ್ಮರಣ…

147
firstsuddi

ಚಾಮರಾಜನಗರ: ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ   ಕಿಚ್ಚುಗತ್ತಿ ಮಾರಮ್ಮನ ದೇವಾಲಯದಲ್ಲಿ ಗೋಪುರ ಶಂಕುಸ್ಥಾಪನೆ  ನಿನ್ನೆ ನಡೆದಿತ್ತು.  ಶಂಕುಸ್ಥಾಪನೆ ಬಳಿಕ  ಮಾರಮ್ಮ ದೇವಾಲಯದಲ್ಲಿ  ಪ್ರಸಾದ ಸೇವಿಸಿ 11 ಮಂದಿ ಮೃತಪಟ್ಟಿದ್ದು,  80ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.  ಅಸ್ವಸ್ಥರನ್ನು ಚಾಮರಾಜನಗರ, ಮೈಸೂರು, ಕಾಮಗೆರೆ,ಕೊಳ್ಳೇಗಾಲ,  ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.ರಾಮಾಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.