ಬಾಳೆಹೊನ್ನೂರು: ಹುಲಿ ಪ್ರತ್ಯಕ್ಷ ;ಸುತ್ತಮುತ್ತಲಿನ ಜನರಲ್ಲಿ ಆತಂಕ…

234
firstsuddi

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಹಲಸೂರು ಗ್ರಾಮದ ರಸ್ತೆಯಲ್ಲಿ ಹುಲಿವೊಂದು ಅರಣ್ಯ ಸಿಬ್ಬಂದಿಗೆ ಕಾಣಿಸಿಕೊಂಡಿದ್ದು, ಹುಲಿಯ ದೃಶ್ಯಗಳು ಅರಣ್ಯ ಸಿಬ್ಬಂದಿ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ಹಿಂದೆಯೂ ಅರಣ್ಯ ಇಲಾಖೆ ಅಳವಡಿಸಿದ ಕ್ಯಾಮರಾದಲ್ಲೂ ಹುಲಿ ಸೆರೆಯಾಗಿತ್ತು ಎನ್ನಲಾಗಿದ್ದು, ಹುಲಿ ಪ್ರತ್ಯಕ್ಷ ಹಿನ್ನೆಲೆ ಹಲಸೂರು ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಜನರು ಮನೆಯಿಂದ ಹೊರಬರೋಕೆ ಹಿಂದೇಟು ಹಾಕುತ್ತಿದ್ದಾರೆ.