ಸುತ್ತೂರು ಜಾತ್ರೆಯಲ್ಲಿ ಬಲೂನ್​ ಸ್ಫೋಟ : ಶ್ರೀಗಳು ಅಪಾಯದಿಂದ ಪಾರು…

243
firstsuddi

ಮೈಸೂರು:ಸುತ್ತೂರು ಜಾತ್ರೆಯಲ್ಲಿ ಬಲೂನ್ ಸ್ಫೋಟಗೊಂಡಿದ್ದು, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಅಪಾಯದಿಂದ ಪಾರಾಗಿದ್ದಾರೆ.ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕುಸ್ತಿ ಪಂದ್ಯಗಳಿಗೆ ನೈಟ್ರೋಜನ್ ತುಂಬಿದ ಬಲೂನ್​ ಹಾರಿ ಬಿಡುವ ಮೂಲಕ ಚಾಲನೆ ನೀಡುವ ಸಂದರ್ಭದಲ್ಲಿ ಬಲೂನ್‍ ಗಳು ಸ್ಫೋಟಗೊಂಡು ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಸುತ್ತೂರು ಶ್ರೀಗಳು,ಕುಸ್ತಿಪಟುಗಳು ಅಲ್ಲೇ ಇದ್ದರು. ಅವಘಡದಲ್ಲಿ ಶ್ರೀಗಳು ಅಪಾಯದಿಂದ ಪಾರಾಗಿದ್ದು, ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.