ವಾಯುವಿಹಾರಕ್ಕೆಂದು ಹೋಗಿದ್ದ ಟೆಕ್ಕಿ ನಾಪತ್ತೆ…

272
firstsuddi

ಬೆಂಗಳೂರು: ವಾಯುವಿಹಾರಕ್ಕೆಂದು ಹೇಳಿ ಹೊರ ಹೋಗಿದ್ದ ಟೆಕ್ಕಿ ನಾಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಸಾಫ್ಟ್​​ವೇರ್​​ ಉದ್ಯೋಗಿ ಪ್ರಸನ್ನರಾಮಚಂದ್ರ(39) ನಾಪತ್ತೆಯಾಗಿದ್ದು,ಲಂಡನ್ ನಲ್ಲಿ ಪ್ರತಿಷ್ಠಿತ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡಿ ಬೆಂಗಳೂರಿಗೆ ವಾಪಸ್ ಆಗಿದ್ದರು. ನವೆಂಬರ್ 9 ರಂದು ವಾಯು ವಿಹಾರಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಪ್ರಸನ್ನ ಅವರು ಹಿಂತಿರುಗಲಿಲ್ಲ . ಬದಲಾಗಿ ಅವರ ಬಗ್ಗೆ ಅಪರಿಚಿತರು ಪ್ರಸನ್ನ ಅವರ ಪತ್ನಿ ಮೊಬೈಲ್​ಗೆ ಮೆಸೇಜ್​ ಮಾಡಿ ನಿಮ್ಮ ಯಜಮಾನರು ನಮ್ಮ ಬಳಿ ಇದ್ದಾರೆ. ಪೊಲೀಸರ ಬಳಿ ಹೋಗಬೇಡಿ ಎಂದಿದ್ದಾರೆ. ಇದರಿಂದ ಗಾಬರಿಗೊಂಡ ಪ್ರಸನ್ನ ಪತ್ನಿ ಬನಶಂಕರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.