ಬೆಂಗಳೂರು: ಇಂದು 2019-20ನೇ ಸಾಲಿನ ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್ ಮಂಡನೆಯಾಗಿದ್ದು, ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಅವರು ಬಜೆಟ್ ಮಂಡನೆ ಮಾಡಿದ್ದಾರೆ.
2019-20ನೇ ಸಾಲಿನ ಬಿಬಿಎಂಪಿ ಬಜೆಟ್ ಹೈಲೈಟ್ಸ್…
- ಕಸ ವಿಲೇವಾರಿಗೆ 375 ಕೋಟಿ ರೂಪಾಯಿ ಮೀಸಲು, ಆಸ್ತಿ ತೆರಿಗೆಯಿಂದ 3.5 ಕೋಟಿ ರೂಪಾಯಿ ನಿರೀಕ್ಷೆ.
- ಸ್ಮಶಾನ ರುದ್ರ ಭೂಮಿಗಳಿಗೆ 12 ಕೋಟಿ.
- ಹೆಣ್ಣು ಮಕ್ಕಳಿಗೆ ಮಹಾಲಕ್ಷ್ಮಿ ಯೋಜನೆ.
- ತುಮಕೂರು ರಸ್ತೆಯಲ್ಲಿ ಸಿದ್ದಗಂಗಾ ಶ್ರೀಗಳ ಪುತ್ಥಳಿ.
- ಶ್ರೀ ಸಿದ್ಧಗಂಗಾ ಡಾ. ಶಿವಕುಮಾರ್ ಸ್ವಾಮೀಜಿ ಕಂಚಿನ ಪ್ರತಿಮೆಗೆ 5 ಕೋಟಿ ರೂ.
- ಶುದ್ಧ ಕುಡಿಯುವ ನೀರಿಗೆ 30 ಕೋಟಿ ರೂ.
- ಬಿಬಿಎಂಪಿ ರೋಶಿನಿ ಯೋಜನೆ ಜಾರಿ.
- ಪಾಲಿಕೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್.
- 33 ಕೆರೆಗಳ ನಿರ್ವಹಣೆಗೆ 25 ಕೋಟಿ .
- ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ 25 ಕೋಟಿ ಮೀಸಲು.
- ಬಡ ಹೃದಯ ರೋಗಿಗಳಿಗೆ ಉಚಿತ ಸ್ಟಂಟ್ ಅಳವಡಿಸಲು 4 ಕೋಟಿ ರೂ
- ಮೀಡಿಯಾ ಸೆಂಟರ್ ಸ್ಥಾಪನೆಗೆ 3 ಕೋಟಿ.
- ಬೈಕ್ ಆಂಬುಲೆನ್ಸ್ ಖರೀದಿಗೆ 2 ಕೋಟಿ ರೂ.
- ಅನಾಥ ಪ್ರಾಣಿಗಳ ರಕ್ಷಣೆ ಬೀದಿ ನಾಯಿಗಳ ಎಬಿಸಿ ಚಿಕಿತ್ಸೆಗೆ 5 ಕೋಟಿ.
- ಮಹಿಳಾ ಸ್ವಾವಲಂಬನೆಗೆ ಸ್ವಂತ ಉದ್ಯೋಗ.
- ನಗರದ ಸ್ವಚ್ಛತೆಗೆ 375 ಕೋಟಿ ರೂ. ಅನುದಾನ.
- ದಿವ್ಯಾಂಗ ಚೇತನ ಕಲ್ಯಾಣಕ್ಕೆ 75 ಕೋಟಿ.
- ಪ್ರತಿ ವಾರ್ಡ್ಗೆ 50 ಬೈಸಿಕಲ್ ವಿತರಣೆಗೆ 40 ಕೋಟಿ.
- ಪಿಯುಸಿ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ನೀಡಲು ನಿರ್ಧರಿಸಲಾಗಿದ್ದು, ಒಂದು ಕೋಟಿ ರೂ ಮೀಸಲಿಡಲಾಗಿದೆ.
- 9. ಗರ್ಭಿಣಿಯರಿಗೆ ಕ್ಯಾಲ್ಸಿಯಂ, ಕಬ್ಬಿಣ ಅಂಶದ ಮಾತ್ರೆ ನೀಡಲು 25 ಲಕ್ಷ.
- ತಾಯಿ ಮಡಿಲು ಯೋಜನೆಗೆ 1.50 ಕೋಟಿ ರೂ.
- ಹಿರಿಯರ ನಾಗರಿಕರ ಕಲ್ಯಾಣಕ್ಕೆ 5 ಕೋಟಿ,
- 24. ಪ್ರತಿ ವಾರ್ಡ್ಗೆ 50 ಟೈಲರಿಂಗ್ ಯಂತ್ರಗಳು.
- ಮಂಗಳಮುಖಿಯರಿಗೆ 1 ಕೋಟಿ ರೂ.










