ಚಿಕ್ಕಮಗಳೂರು :ಮಲೆನಾಡಲ್ಲಿ ಕಳೆದೊಂದು ವರ್ಷದಿಂದ ಕಾಡುಕೋಣ ಆಗಾಗ ಕಾಣಿಸಿಕೊಳ್ಳುತ್ತಿದ್ದು, ಬೃಹದಾಕಾರದ ಕಾಡುಕೋಣವನ್ನು ಕಂಡು ಕೂಲಿ ಕಾರ್ಮಿಕರು ಗಾಬರಿಗೊಂಡಿರುವ ಘಟನೆ ತಾಲೂಕಿನ ಮಲ್ಲಂದೂರು ಸಮೀಪದ ಕಾಫಿ ತೋಟವೊಂದರಲ್ಲಿ ನಡೆದಿದೆ.
ಕಾಡುಕೋಣ ನೀರು ಕುಡಿಯಲು ಬಂದಿರಬಹುದು ಎನ್ನಲಾಗಿದ್ದು, ಬೃಹದಾಕಾರದ ಕಾಡುಕೋಣವನ್ನು ಕಂಡು ಕೂಲಿ ಕಾರ್ಮಿಕರು ಗಾಬರಿಗೊಂಡು ಕಾಲ್ಕಿತ್ತಿದ್ದಾರೆ.