ಬಿಜೆಪಿಯ ಕೆಲವು ಶಾಸಕರು ಈಗಾಗಲೇ ನಮ್ಮನ್ನು ಸಂಪರ್ಕಿಸಿದ್ದಾರೆ.-ದಿನೇಶ್ ಗುಂಡೂರಾವ್…

441
firstsuddi

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿಜೆಪಿ ಇದೇ ರೀತಿಯ ಕುತಂತ್ರ ಮುಂದುವರೆಸಿದರೆ ಬಿಜೆಪಿಯ ವಿಕೆಟ್ ಉರುಳಲು ಪ್ರಾರಂಭವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದು, ಬಿಜೆಪಿಯ ಕೆಲವು ಶಾಸಕರು ಈಗಾಗಲೇ ನಮ್ಮನ್ನು ಸಂಪರ್ಕಿಸಿದ್ದಾರೆ. ಐದು ಲೋಕಸಭೆ ಸದಸ್ಯರು ಸಹ ಕಾಂಗ್ರೆಸ್ ಗೆ ಬರಲು ಉತ್ಸುಕರಾಗಿದ್ದಾರೆ. ಆದರೆ ಬಿಜೆಪಿಯಂತೆ ಕುತಂತ್ರದ ರಾಜಕಾರಣ ನಮಗೆ ಅವಶ್ಯಕತೆ ಇಲ್ಲದ ಕಾರಣ ಕಾಂಗ್ರೆಸ್ ಈ ವಿಷಯದಲ್ಲಿ ಮುಂದುವರೆಯುತ್ತಿಲ್ಲ .ಬೆಳಗಾವಿ ರಾಜಕೀಯ ಸಣ್ಣ ಗೊಂದಲದ ಹೊರತಾಗಿ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ, ಪಕ್ಷದ ಯಾವ ಶಾಸಕರೂ ಸಹ ಪಕ್ಷ ಬಿಟ್ಟು ಹೋಗುತ್ತಿಲ್ಲ ಎಂದಿದ್ದಾರೆ.