ಬೆಂಗಳೂರು: ಹೆಚ್ ಡಿ ದೇವೇಗೌಡ ಅವರ ಟ್ವಿಟ್ ಹೇಳಿಕೆಗೆ ಬಿಜೆಪಿ ಕರ್ನಾಟಕ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿದ್ದು, ಅಲೆಲೆಲೆ,ಕೊನೆಗೂ ಎದ್ರು ಸನ್ಮಾನ್ಯ ಶ್ರೀ. ದೇವೇಗೌಡ್ರು, ನಿಮ್ಮ ಮಗ ಹೊಸ ವರ್ಷದ ಆಚರಣೆಗೆ ಮೋಜು ಮಾಡಲು ಸಿಂಗಾಪುರಕ್ಕೆ ಹೋದಾಗ ನಿಮಗೆ ಬರದ ನೆನಪಾಗಲಿಲ್ಲವೇ ? ನಿಮ್ಮ ಸರ್ಕಾರ ಬಂದಾಗಿನಿಂದ ರಾಜ್ಯದ 377 ರೈತರು ಸಾಲ ಬಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಆಗ ನಿಮ್ಮ ಮಗನಿಗೆ ಬುದ್ಧಿಹೇಳುವಷ್ಟು ಅರಿವು ನಿಮಗೆ ಇರಲಿಲ್ಲವೇ ? ಎಂದು ಬಿಜೆಪಿ ಕರ್ನಾಟಕ ಟ್ವೀಟ್ ಮೂಲಕ ಪ್ರಶ್ನಿಸಲಾಗಿದೆ.











