ಬಿಜೆಪಿಯವರು ಸುಳ್ಳು ಹೇಳುವಲ್ಲಿ ನಿಸ್ಸೀಮರು :ಸಿದ್ದರಾಮಯ್ಯ…

187

ಚಿಕ್ಕಮಗಳೂರು: ಬೀರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯವರು ಸುಳ್ಳು ಹೇಳುವಲ್ಲಿ ನಿಸ್ಸೀಮರು. ಅವರಿಗೆ ಸತ್ಯ ಹೇಳಿಯೇ ಗೊತ್ತಿಲ್ಲ. ಎರಡು ದಿನದಲ್ಲಿ ಸರ್ಕಾರ ರಚನೆ ಮಾಡ್ತೀವಿ ಅಂತಾ ಹೇಳಿದ್ರು. ಹಾಗಾದ್ರೆ ಈಗ ಏನು ಹೇಳ್ತಾರೆ. ನಮ್ಮ ಶಾಸಕರು ಯಾರು ದುಡ್ಡು ತಗೊಂಡು ಪಕ್ಷಾಂತರ ಮಾಡಲ್ಲ. ಭ್ರಷ್ಟಾಚಾರ ಮಾಡಿ ಬಿಜೆಪಿಯವರ ಬಳಿ ಟನ್ ಗಟ್ಟಲೇ ಹಣ ಗಳಿಸಿದ್ದಾರೆ. ನಮ್ಮ ಶಾಸಕರಿಗೆ ಹಣ ಹಾಗೂ ಅಧಿಕಾರದ ಆಮಿಷ ಹೊಡ್ಡುತ್ತಿದ್ದಾರೆ. ಎರಡ್ಮೂರು ಭಾರಿ ಆಪರೇಷನ್ ಕಮಲ ವಿಫಲವಾಗಿದೆ. ಇದ್ರಿಂದ ಭ್ರಮೆ ನಿರಸರಾಗಿದ್ದಾರೆ. ಕಿಂಚಿತ್ತು ಮಾನ ಮರ್ಯಾದೆ ಇದ್ರೆ ಬಿಜೆಪಿಯವರು ವಿರೋಧ ಪಕ್ಷವಾಗಿ ಕೆಲಸ ಮಾಡಲಿ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.