ಚೆನ್ನೈ : ಕಾಲಿವುಡ್‍ನ ಸ್ಟಾರ್ ನಟ ಧನುಷ್ ಹಾಗೂ ಹಿರಿಯ ನಟ, ಡಿಎಂಕೆ ಮುಖ್ಯಸ್ಥ ವಿಜಯಕಾಂತ್ ಅವರ ಮನೆಯಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಬೆದರಿಕೆ ಹಾಕಲಾಗಿದೆ. ಚೆನ್ನೈನ ಅಭಿರಾಮಪುರಂನಲ್ಲಿ ಇರುವ ಧನುಷ್ ಅವರ ನಿವಾಸ ಹಾಗೂ ವಿರುಗಂಬಕ್ಕಂನಲ್ಲಿ ಇರುವ ವಿಜಯಕಾಂತ್ ನಿವಾಸದಲ್ಲಿ ಬಾಂಬ್ ಇರಿಸಿದ್ದೇವೆ ಎಂದು ಅನಾಮಧೇಯ ವ್ಯಕ್ತಿಗಳು ಪೊಲೀಸ್ ಕಂಟ್ರೋಲ್ ರೂಂ ಗೆ 2 ಬಾರಿ ಕರೆ ಮಾಡಿದ್ದಾರೆ. ಇದರಿಂದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರು ನಟರ ಮನೆಗೆ ಭೇಟಿ ನಿಡಿ ಸಂಪೂರ್ಣ ಮನೆಯನ್ನು ಪರಿಶೀಲನೆ ನಡೆಸಿದ್ದಾರೆ. ಆದರೆ ಮನೆಯಲ್ಲಿ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗದ ಹಿನ್ನೆಲೆ, ಇದೊಂದು ಹುಸಿ ಬಾಂಬ್ ಕರೆಯಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ಕರೆ ಮಾಡಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಕೂಡಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆಯೂ ಕೂಡಾ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್, ಥಳಪತಿ ವಿಜಯ್ ಹಾಗೂ ಸೂರ್ಯ ಅವರ ಮನೆಯಲ್ಲೂ ಬಾಂಬ್ ಇರಿಸಲಾಗಿದೆ ಎಂದು ದುಷ್ಕರ್ಮಿಗಳು ಹುಸಿ ಬಾಂಬ್ ಬೆದರಿಕೆ ಹಾಕಿದ್ದರು.










