ರೆಹಾನಾ ಫಾತಿಮಾಳನ್ನು ಸೇವೆಯಿಂದ ಅಮಾನತು ಮಾಡಿದ ಬಿಎಸ್​ಎನ್​ಎಲ್​…

285
firstsuddi

ಕೊಚ್ಚಿ : ಫೇಸ್‌ ಬುಕ್‌ ಪೋಸ್ಟ್‌ಗಳ ಮೂಲಕ ಜನರ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಾರೆಂಬ ಆರೋಪದ ಮೇಲೆ  22ರಂದು ರೆಹನಾ ಫಾತಿಮಾ ಮೇಲೆ ದೂರು ದಾಖಲಿಸಲಾಗಿತ್ತು. ಈ ಹಿನ್ನಲೆಯಲ್ಲಿ   ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಅವರನ್ನು ನಿನ್ನೆ ಪಥನಂಥಿಟ್ಟ ಪೊಲೀಸರು ಬಂಧಿಸಿದ್ದಾರೆ.   ಇದೀಗ ರೆಹನಾ ಫಾತಿಮಾ ಅವರನ್ನು  ಭಾರತ್​ ಸಂಚಾರ್ ನಿಗಮ ಲಿಮಿಟೆಡ್​ (ಬಿಎಸ್​ಎನ್​ಎಲ್​) ಹುದ್ದೆಯಿಂದ  ವಜಾ ಮಾಡಲಾಗಿದೆ ಎಂದು ಬಿಎಸ್‍ಎನ್‍ಎಲ್ ವಕ್ತಾರರು ತಿಳಿಸಿದ್ದಾರೆ.