ಕೇಂದ್ರ ಬಜೆಟ್ : ಆದಾಯ ತೆರಿಗೆದಾರರಿಗೆ ಬಂಪರ್ ಗಿಫ್ಟ್…!

313
firstsuddi

ನವದೆಹಲಿ : ಕೇಂದ್ರ ಸರ್ಕಾರದ 2ನೇ ಅವಧಿಯ ಬಜೆಟ್‍ನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದು, ಆದಾಯ ತೆರಿಗೆಯಲ್ಲಿ ಭಾರಿ ಕಡಿತವನ್ನು ಮಾಡುವುದರ ಮೂಲಕ ಮಧ್ಯಮ ವರ್ಗದವರಿಗೆ ಆಫರ್ ನೀಡಿದ್ದಾರೆ.

ಆದಾಯ ತೆರಿಗೆಯ ವಿವರಣೆ :

• 2.5 ಲಕ್ಷದಿಂದ 5 ಲಕ್ಷದವರೆಗೆ ಯಾವುದೇ ತೆರಿಗೆ ಇರುವುದಿಲ್ಲ.
• 7.5 ಲಕ್ಷದಿಂದ 10 ಲಕ್ಷದವರೆಗೆ ಶೇ.15 ರಷ್ಟು ತೆರಿಗೆ.
• 5 ಲಕ್ಷದಿಂದ 7.5 ಲಕ್ಷದವರೆಗೆ ಶೇ.10ರಷ್ಟು ತೆರಿಗೆ.
• 10 ಲಕ್ಷದಿಂದ 12.5 ಲಕ್ಷದವರೆಗೆ ಶೇ.20 ರಷ್ಟು ತೆರಿಗೆ.
• 12.5 ಲಕ್ಷದಿಂದ 15 ಲಕ್ಷದವರೆಗೆ ಶೇ.25 ರಷ್ಟು ತೆರಿಗೆ.
• 15 ಲಕ್ಷಕ್ಕಿಂದ ಅಧಿಕ ಆದಾಯ ಇದ್ದರೆ ಶೇ.30 ರಷ್ಟು ತೆರಿಗೆ.
• ನೇರ ತೆರಿಗೆ ಹೊಂದಿರುವ ವಿವಾದಗಳನ್ನು ಶಮನಗೊಳಿಸುವುದಕ್ಕಾಗಿ “ವಿವಾದ ಸೇ ವಿಶ್ವಾಸ್” ಯೋಜನೆಯಲ್ಲಿ ಬಡ್ಡಿ ಮತ್ತು ದಂಡದಿಂದ ವಿನಾಯಿತಿ.
• ಹೊಸ ವ್ಯವಸ್ಥೆಯಲ್ಲಿ ವಿವಿಧ 70 ಕಡಿತಗಳನ್ನು ತೆಗೆದು ಹಾಕಲಾಗಿದೆ. ಒಂದು ವೇಳೆ ತೆರಿಗೆದಾರರು ಬಯಸಿದರೆ ಹಳೆಯ ವ್ಯವಸ್ಥೆಯ ಲಾಭಗಳನ್ನು ಪಡೆಯಬಹುದು.
• ಹೊಸ ತೆರಿಗೆಯಿಂದಾಗಿ 15 ಲಕ್ಷ ಅಧಿಕ ಆದಾಯ ಹೊಂದಿದ ತೆರಿಗೆದಾರನಿಗೆ 78 ಸಾವಿರ ರೂ ಲಾಭ.
• ಆಧಾರ್ ಕಾರ್ಡ್ ಮುಖಾಂತರ ಅರ್ಜಿ ಸಲ್ಲಿಸುವ ಅರ್ಜಿದಾರನಿಗೆ ಕಡಿಮೆ ಸಮಯದಲ್ಲಿ ಪ್ಯಾನ್ ಕಾರ್ಡ್ ನೀಡಲಾಗುವುದು.
• ಕಂಪನಿಯ ಡಿವಿಡೆಂಟ್ ಮೇಲಿನ ಲಾಭಾಂಶ ತೆರಿಗೆ ಕಂಪನಿಗಳ ಬದಲಾಗಿ ಶೇರುದಾರನಿಗೆ ನೀಡಲಾಗುವುದು