ಕೇಂದ್ರ ಸರ್ಕಾರ ರೈತರ ಸಾಲಮನ್ನಾವನ್ನು ಮೊದಲೇ ಮಾಡಿದ್ದರೆ ರೈತರ ಪ್ರಾಣ ಉಳಿಯುತ್ತಿತ್ತು: ಡಾ. ಜಿ ಪರಮೇಶ್ವರ್…

223
firstsuddi

ಬೆಳಗಾವಿ: ರೈತರ ಸಾಲಮನ್ನಾ ಮಾಡಲು ಕೇಂದ್ರ ಸರ್ಕಾರ ಚಿಂತನೆ ಮಾಡಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಉಪ ಮುಖ್ಯಮಂತ್ರಿ  ಡಾ.ಜಿ ಪರಮೇಶ್ವರ್ ಅವರು  ಸಾಲಮನ್ನಾ  ಕೇಂದ್ರ ಸರ್ಕಾರದ ರಾಜಕೀಯ ಸ್ಟಂಟ್.  ಕೇಂದ್ರ ಸರ್ಕಾರ ರೈತರ  ಸಾಲಮನ್ನಾವನ್ನು ಮೊದಲೇ ಮಾಡಿದ್ದರೆ  ರೈತರ ಪ್ರಾಣ ಉಳಿಯುತ್ತಿತ್ತು.  ಲೋಕಸಭಾ ಚುನಾವಣೆ ಹಿನ್ನಲೆ ಕೇಂದ್ರ ಸರ್ಕಾರ ಸಾಲಮನ್ನಾಗೆ ಮಾಡಲು ಮುಂದಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಪರಮೇಶ್ವರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.