ಚಿಕ್ಕಮಗಳೂರು : ಬೀದಿಯಲ್ಲಿ ಕುಡುಕರ ಹಾವಳಿಗೆ ಬೇಸತ್ತ ಮಹಿಳೆಯೋರ್ವರು ವೈನ್ ಶಾಪ್ ಮುಚ್ಚುವಂತೆ ಆಕ್ರೋಶಗೊಂಡಿರುವ ಘಟನೆ ನಗರದ ಮಾರ್ಕೆಟ್ ರೋಡ್ ಬಳಿ ನಡೆದಿದೆ. ನಿತ್ಯವೂ ಕುಡುಕ ಪುಂಡರಿಂದ ರಸ್ತೆಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ಮಹಿಳೆಯೋರ್ವರು ನಗರದ ಶಿವ ವೈನ್ ಶಾಪ್ ಮಾಲೀಕನಿಗೆ ಬೆಳ್ಳಂಬೆಳಗ್ಗೆ ಕೈಯಲ್ಲಿ ಕಲ್ಲು ಹಿಡಿದು ವೈನ್ ಶಾಪ್ ಮುಚ್ಚುವಂತೆ ಆವಾಜ್ ಹಾಕಿದ್ದಾರೆ. ಆಕ್ರೋಶಗೊಂಡ ಮಹಿಳೆಗೆ ಸ್ಥಳೀಯರು ಸಾಥ್ ನೀಡಿದ್ದು, ವೈನ್ ಶಾಪ್ ಮಾಲೀಕ ಮಹಿಳೆಯ ರೌದ್ರಾವತಾರಕ್ಕೆ ಹೆದರಿ ವೈನ್ ಶಾಪ್ ಮುಚ್ಚಿದ್ದಾರೆ .ಚಿಕ್ಕಮಗಳೂರು ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.









