ಮೈಸೂರು : ಬಿಗ್ಬಾಸ್ ಜೋಡಿ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಹಿನಕಲ್ನಲ್ಲಿರುವ ಸ್ಟೆಕ್ಟ್ರಾ ಕನ್ವೆನ್ಷನ್ ಹಾಲ್ನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರ ಮದುವೆ ಗೌಡ ಹಾಗೂ ಶೆಟ್ಟಿ ಸಂಪ್ರದಾಯಗಳೆರಡಲ್ಲೂ ನೆರವೇರಿದ್ದು, ಇಂದು ಬೆಳಿಗ್ಗೆ 8:15 ರಿಂದ 9ಗಂಟೆಗೆ ಧಾರಾ ಮುಹೂರ್ತದ ಸಮಯದಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರನ್ನು ವರಿಸಿದ್ದಾರೆ. ಈ ಶುಭ ಕಾರ್ಯಕ್ರಮದಲ್ಲಿ ನಿವೇದಿತಾ ಹಾಗೂ ಚಂದನ್ ಶೆಟ್ಟಿ ಅವರ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಹಾಗೂ ಕಲಾವಿದರು ಭಾಗವಹಿಸಿ ನವಜೋಡಿಗಳಿಗೆ ಶುಭಕೋರಿದ್ದಾರೆ.










