ಚಿಕ್ಕಮಗಳೂರು : ಕಾಣೆಯಾಗಿದ್ದ ವ್ಯಕ್ತಿಯೋರ್ವ ಶವವಾಗಿ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿರುವ ಘಟನೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಿಂಭಾಗದಲ್ಲಿರುವ ಹಳೆ ಜೈಲು ಬಳಿ ನಡೆದಿದೆ. ಕಾರು ಚಾಲಕ ಸಿದ್ದಲಿಂಗಸ್ವಾಮಿ (35)ಮೃತ ವ್ಯಕ್ತಿ. ಸಿದ್ದಲಿಂಗಸ್ವಾಮಿ ಕಳೆದ ಜನವರಿ 5ರಿಂದ ಕಾಣೆಯಾಗಿದ್ದು, ಪತ್ನಿ ಜೊತೆ ಒಂದು ತಿಂಗಳಿಂದ ನಿರಂತರವಾಗಿ ಜಗಳ ಮಾಡಿಕೊಂಡು ಮನನೊಂದಿದ್ದ ಎನ್ನಲಾಗಿದ್ದು, ಕೊಲೆ ಮಾಡಿರುವುದಾಗಿ ಸಿದ್ಧಲಿಂಗಸ್ವಾಮಿ ಸ್ನೇಹಿತರು ಶಂಕೆ ವ್ಯಕ್ತಪಡಿಸುತ್ತಿದ್ದು, ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.









