ಚಿಕ್ಕಮಗಳೂರು : ನಗರದ ಹೊರವಲಯದಲ್ಲಿರುವ ಬಸವ ಮಂದಿರ ವಿರಕ್ತ ಮಠ ಸ್ವಾಮೀಜಿ ವಿರುದ್ದ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ಹಿನ್ನಲೆ ಮಠದ ಜಯಬಸವಾನಂದ ಸ್ವಾಮೀಜಿ ಅವರು ಪೀಠ ತ್ಯಾಗ ಮಾಡಿದ್ದಾರೆ. ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರೋ ಬಗ್ಗೆ ಪತ್ರಿಕೆವೊಂದರಲ್ಲಿ ವರದಿಯಾಗಿತ್ತು ಈ ಹಿನ್ನಲೆ ಸತ್ಯಾಂಶ ಹೊರ ಬರುವ ತನಕ ಪೀಠವನ್ನು ತ್ಯಜಿಸಲು ನಿರ್ಧರಿಸಿ ಸ್ವಾಮೀಜಿ ಬೆಂಗಳೂರಿಗೆ ತೆರಳಿದ್ದಾರೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.










