ಮಂಡ್ಯ: ಪಾಂಡವಪುರದ ಕ್ಯಾತನಹಳ್ಳಿಯಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಆರ್ ಅಶೋಕ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜನರನ್ನು ಮರುಳು ಮಾಡುತ್ತಿದ್ದಾರೆ. ಸಾಯ್ತೀನಿ, ಸಾಯ್ತೀನಿ ಅಂತಾ ಹೋದಲ್ಲೆಲ್ಲ ಹೇಳುತ್ತಿದ್ದಾರೆ. ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನ ಮಂಡ್ಯಕ್ಕೆ ಬಂದು ಆರೋಗ್ಯ ಸರಿಯಿ,ಲ್ಲ ನಿಮಗೋಸ್ಕರ ಬದುಕಿದ್ದೇನೆ ಎಂದು ಹೇಳಿ ಮಂಡ್ಯದಲ್ಲಿ 7 ಸ್ಥಾನಗಳನ್ನು ಪಡೆದರು. ಈಗ ಮುಖ್ಯಮಂತ್ರಿಯಾಗಿದ್ದಾರೆ. ಆ ಬಳಿಕವಾದರೂ ಅವರ ಆರೋಗ್ಯ ಸರಿಯಾಗಬೇಕಿತ್ತು. ಈಗ ಮತ್ತೆ ಬಂದು ಇಸ್ರೇಲ್‌ಗೆ ಹೋದಾಗಲೇ ಸಾಯಬೇಕಿತ್ತು, ಬದುಕಿ ಬಂದಿದ್ದೇನೆ ಎಂದಿದ್ದಾರೆ. ಹೀಗೆ ಹೇಳುತ್ತಾ ಹೋದರೆ ಯಾರು ನಂಬುತ್ತಾರೆ ಎಂದು ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.










