ಚಿಕ್ಕಮಗಳೂರು : ಚನ್ನಗೊಂಡನಹಳ್ಳಿಗೆ ಕೆ.ಎಸ್. ಆರ್.ಟಿ.ಸಿ. ಬಸ್ ಕಲ್ಪಿಸಲು ಗ್ರಾಮಸ್ಥರ ಒತ್ತಾಯ…

267

ಚಿಕ್ಕಮಗಳೂರು : ತಾಲ್ಲೂಕಿನ ವಸ್ತಾರೆ ಹೋಬಳಿ ಚನ್ನಗೊಂಡನಹಳ್ಳಿ ಗ್ರಾಮಕ್ಕೆ ಕೆ.ಎಸ್. ಆರ್.ಟಿ.ಸಿ. ಬಸ್ ಸಂಪರ್ಕ ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ನಿಗಮದ ಅಧಿಕಾರಿಗಳು ಹಲವು ಬಾರಿ ಭೇಟಿಯಾಗಿ ಮನವಿ ನೀಡಿದರೂ ಯಾವುದೆ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಒಮ್ಮೆ ರೂಟ್ ಸರ್ವೆ ಮಾಡಿಸಿ ಬಸ್ ಸಂಚರಿಸಲು ಸಮ್ಮ ತಿಸಿದ ಮೇರೆಗೆ ಇಲಾಖೆಯಿಂದಲೂ ಅನುಮೋದನೆ ದೊರೆತಿರುತ್ತದೆ.
ಈಗ ಬಸ್ ಸಂಚಾರಕ್ಕೆ ಅನುಮೋದನೆ ದೊರೆತಿದ್ದರೂ ಸಹ ಚುನಾವಣೆ ಘೋಷಣೆಯಾದ ಹಿನ್ನೆ ಲೆಯಲ್ಲಿ ನೀತಿ ಸಂಹಿತೆಯ ಕಾರಣವನ್ನು ತೋರಿಸಿ ಬಸ್ ಸಂಚರಿಸಲು ನಿರಾಕರಿಸಲಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.