ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣವನ್ನ ಪರಿಶೀಲನೆ ನಡೆಸಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಏಕಾಏಕಿ ಮಹಿಳಾ ಶೌಚಗೃಹಕ್ಕೆ ತೆರಳಿದ ಪರಿಣಾಮ ಶೌಚಾಲಯದ ರೆಸ್ಟ್ ರೂಂನಲ್ಲಿದ್ದ ಮಹಿಳೆಯರು ಮುಜುಗರಕ್ಕೀಡಾದ್ರು. ಚಿಕ್ಕಮಗಳೂರಿಗೆ ಭೇಟಿ ನೀಡಿದ್ದ ಸಾರಿಗೆ ಸಚಿವ ತಮ್ಮಣ್ಣ, ಸಾರಿಗೆ ಸಂಸ್ಥೆ ನಷ್ಟದಲ್ಲಿದ್ದು, ಲಾಭಕ್ಕಾಗಿ ಪ್ರಯತ್ನ ಮಾಡ್ತಿದ್ದೇವೆ. ನಮ್ಮ ಬಸ್ ಸ್ಟ್ಯಾಂಡ್‍ಗಳು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ನಿಲ್ದಾಣಗಳಂತೆ ಇರಬೇಕು. ಇಲ್ಲಿಗೆ ಬರೋರು ಮಧ್ಯಮ ವರ್ಗದ ಜನ ಹಾಗೂ ಬಡವರು. ಶ್ರೀಮಂತರು ಬರೋದಿಲ್ಲ. ನಮ್ಮ ನಿಲ್ದಾಣಗಳು ಅಂತರಾಷ್ಟ್ರೀಯ ಮಟ್ಟದ ನಿಲ್ದಾಣಗಳಂತಿರಬೇಕು ಅನ್ನೋದು ನಮ್ಮ ಸರ್ಕಾರದ ಯೋಜನೆ ಅಂದ್ರು. ಇದೇ ವೇಳೆ, ಬಸ್ ನಿಲ್ದಾಣದಲ್ಲಿದ್ದ ರಾಜಹಂಸ ಹಾಗೂ ರೆಡ್‍ಬಸ್‍ಗೆ ಹತ್ತಿ ಸೀಟ್ ಹಾಗೂ ಶುಚಿತ್ವವನ್ನ ಪರಿಶೀಲನೆ ನಡೆಸಿ, ಪ್ರಯಾಣಿಕರ ಕುಂದುಕೊರತೆಗಳನ್ನ ಕೇಳಿದ್ರು. ಅಲ್ಲಿಂದ ಬಸ್ ನಿಲ್ದಾಣವನ್ನೂ ಪರಿಶೀಲಿನೆ ನಡೆಸಿದ್ರು. ಇದೇ ವೇಳೆ, ಪುರುಷರು ಹಾಗೂ ಮಹಿಳೆಯರು ಶೌಚಾಲಯಕ್ಕೂ ತೆರಳಿ ಶುಚಿತ್ವ, ನೀರಿನ ಸೌಲಭ್ಯ ಹಾಗೂ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ, ಮಹಿಳಾ ಶೌಚಾಲಯದಲ್ಲಿ ಸಮರ್ಪಕವಾಗಿ ನೀರಿನ ಸೌಲಭ್ಯವಿಲ್ಲದ ಕಾರಣ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ್ರು.
Home Breaking News ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಪರಿಶೀಲನೆ ನಡೆಸಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ