ಚಿಕ್ಕಮಗಳೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗಣರಾಜ್ಯೋತ್ಸವವನ್ನು ಶನಿವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಅರೇನಳ್ಳಿ ಪ್ರಕಾಶ್ ಲಕ್ಷಾಂತರ ದೇಶಭಕ್ತರ ಹೋರಾಟ, ತ್ಯಾಗ ಮತ್ತು ಬಲಿದಾನದಿಂದ ಲಭಿಸಿರುವ ಸ್ವಾತಂತ್ರ್ಯವನ್ನು ಹಾಗೂ ಸಂವಿಧಾನವನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದರು.
ಎಪಿಎಂಸಿ ನಿರ್ದೇಶಕರಾದ ಹೆಚ್.ಎಸ್.ಕವೀಶ್, ಶಿವೇಗೌಡ, ಹೆಚ್.ಈ.ಪ್ರಕಾಶ್, ಕಾರ್ಯದರ್ಶಿ ಅಭಿನಂದನ್ ಹಾಜರಿದ್ದರು.