ಚಿಕ್ಕಮಗಳೂರು: ನಗರದ ನೇಕಾರ ಬೀದಿಯ ಶ್ರೀ ಕೋದಂಡ ರಾಮಚಂದ್ರಸ್ವಾಮಿ ದೇವಾಲಯದಲ್ಲಿ ವಾರ್ಷಿಕೋತ್ಸವ ಮತ್ತು ಶ್ರೀ ರಾಮನವಮಿ ಉತ್ಸವವನ್ನು ಶನಿವಾರ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.ರಾಮನವಮಿ ಪ್ರಯುಕ್ತ ಮೂಲ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಸರ್ವತೋ ಮಂಡಲ ಪೂಜೆ, ಶ್ರೀ ರಾಮತಾರಕ ಮೂಲ ಮಂತ್ರ ಹೋಮ ಜರುಗಿತು.ಪೂರ್ಣಾಹುತಿ ನಂತರ ಮಹಾಮಂಗಳಾರತಿ, ವಸಂತಸೇವೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು: ಕೋದಂಡ ರಾಮಚಂದ್ರಸ್ವಾಮಿ ದೇವಾಲಯದಲ್ಲಿ ಇಂದು ವಾರ್ಷಿಕೋತ್ಸವ ಪೂಜೆ ಮತ್ತು ರಾಮನವಮಿ ಆಚರಿಸಲಾಯಿತು…










