ಸಿ ಎಂ ರೈತರ ಸಮಸ್ಯೆಯನ್ನು ಬಗೆಹರಿಸುತ್ತಾರೆ: ಅನಿತಾ ಕುಮಾರಸ್ವಾಮಿ…

271
firstsuddi

ರಾಮನಗರ: ರೈತರ ಪ್ರತಿಭಟನೆ ಬಗ್ಗೆ ಪ್ರತಿಕ್ರಯಿಸಿರುವ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ರೈತರ ಪ್ರತಿಭಟನೆ ವಿಚಾರ ನನಗೇನು ಗೊತ್ತಿಲ್ಲ.  ರೈತರ ಬಗ್ಗೆ ಕುಮಾರಸ್ವಾಮಿ ಅವರಿಗೆ ಇರುವಷ್ಟು ಕಾಳಜಿ ಬೇರೆ ಯಾವ ರಾಜಕಾರಣಿಗೂ ಇಲ್ಲ. ಎಲ್ಲ ರೈತರ  ಬಳಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು  ಚರ್ಚೆ ಮಾಡುತ್ತಾರೆ. ಎಲ್ಲ ರೈತರ ಸಮಸ್ಯೆಯನ್ನು  ಬಗೆಹರಿಸುತ್ತಾರೆ ಅದರಲ್ಲಿ ರಾಜಕೀಯ ಬೆರೆಸುವುದು ಬೇಡ. ನನ್ನ ಕ್ಷೇತ್ರದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಎಲ್ಲ ಸಮಸ್ಯೆಗಳಿಗೂ ಸ್ಪಂದಿಸುತ್ತೇನೆ ರಾಮನಗರ ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದಿದ್ದಾರೆ.