ಶ್ರೀನಗರ : ಜಮ್ಮು ಕಾಶ್ಮೀರಾದ ಪುಲ್ವಾಮಾ ಜಿಲ್ಲೆಯಲ್ಲಿ ಮತ್ತೊಮ್ಮೆ ಉಗ್ರರು ಭೀಕರ ಸ್ಪೋಟವನ್ನು ನಡೆಸುವ ಸಂಚನ್ನು ಭಾರತೀಯ ಯೋಧರು ವಿಫಲಗೊಳಿಸಿದ್ದು, ಇದರಿಂದ ಸಂಭವಿಸಬೇಕಾಗಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕೂಡಾ ಉಗ್ರರು ಪುಲ್ವಾಮಾ ಜಿಲ್ಲೆಯ ತುಜಾನ್ ಗ್ರಾಮದ ಸೇತುವೆ ಅಡಿಯಲ್ಲಿ ಸ್ಪೋಟಕವನ್ನು ಇರಿಸಿದ್ದರು. ಆದರೆ ಇದನ್ನು ಪತ್ತೆ ಹಚ್ಚಿದ ಯೋಧರು ಉಗ್ರರ ಸಂಚನ್ನು ವಿಫಲಗೊಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಯೋಧರು ಹೆಚ್ಚಾಗಿ ಬಳಕೆ ಮಾಡುತ್ತಿದ್ದ ಸೇತುವೆ ಅಡಿಯಲ್ಲಿ ಉಗ್ರರು ಸ್ಪೋಟಕಗಳನ್ನು ಇರಿಸಿದ್ದರು. ಇದನ್ನು ಪತ್ತೆ ಹಚ್ಚಿ ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.










