ಸಿಲಿಕಾನ್ ಸಿಟಿಯಲ್ಲಿ ಮುಂದುವರೆದ ಮಹಾ ಮಳೆ…

313
firstsuddi

ಬೆಂಗಳೂರು :ಸೋಮವಾರ ರಾತ್ರಿ ರಾಜಧಾನಿಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ರಾತ್ರಿ 10 ಗಂಟೆಯ ವೇಳೆಗೆ ಗುಡುಗು ಮಿಂಚಿನ ಅಬ್ಬರದಿಂದ ಆರಂಭವಾದ ಮಳೆ ನಿರಂತರವಾಗಿ ಸುರಿದಿದೆ. ಭಾರೀ ಮಳೆಗೆ ನಾಯಂಡಹಳ್ಳಿ, ನಂದಿನಿಲೇಔಟ್, ಓಕಳೀಪುರಂ, ಮಲ್ಲೇಶ್ವರಂ, ಮತ್ತಿಕೆರೆ ಭಾಗಗಳು ಜಲಾವೃತಗೊಂಡಿದ್ದು, ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ.ಮಳೆ ಇನ್ನೂ ಎರಡು ದಿನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.