ಕೊರೊನಾ ಭೀತಿ-2000 ಮಾಸ್ಕ್ ಗಳನ್ನೇ ಕದ್ದೊಯ್ದ ದುಷ್ಕರ್ಮಿಗಳು…

303
firstsuddi

ಪ್ಯಾರಿಸ್ : ವಿಶ್ವದಾಧ್ಯಂತ ಕೊರೊನಾ ಭೀತಿ ಹೆಚ್ಚಾಗುತ್ತರುವ ಬೆನ್ನಲ್ಲೇ ದುಷ್ಕರ್ಮಿಗಳು ಆಸ್ಪತ್ರೆಗೆ ಶಾಕ್ ನೀಡಿದ್ದು, ಆಸ್ಪತ್ರೆಯಲ್ಲಿ ಇಟ್ಟಿದ್ದ ಮಾಸ್ಕ್‍ಗಳನ್ನೇ ಕದ್ದೊಯ್ದಿರುವ ಘಟನೆ ದಕ್ಷಿಣ ಫ್ರಾನ್ಸ್ ನ ಮಾರ್ಸಿಲ್ಲೇ ಆಸ್ಪತ್ರೆಯಲ್ಲಿ ನಡೆದಿದೆ. ಕೊರೊನಾ ವೈರಸ್ ಸೋಂಕಿತ ದೇಶಗಳಲ್ಲಿ ಮಾಸ್ಕ್ ಗಳಿಗೆ ಹಾಹಾಕಾರ ಶುರುವಾಗಿರುವುದನ್ನೇ ಲಾಭವಾಗಿಸಿಕೊಂಡ ದುಷ್ಕರ್ಮಿಗಳು ಮಾರ್ಸಿಲ್ಲೆಯ ಆಸ್ಪತ್ರೆಯೊಂದರಲ್ಲಿ ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳಿಗಾಗಿ ತಂದಿಟ್ಟಿದ್ದ 2000 ಮಾಸ್ಕ್ ಗಳನ್ನು ಕಳ್ಳತನ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕೊರೊನಾ ವೈರಸ್‍ಗೆ ಚೀನಾದಲ್ಲಿ ಈವರೆಗೆ 3250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 80,270 ಮಂದಿಯಲ್ಲಿ ಸೋಂಕು ತಗುಲಿರುವುದಾಗಿ ದೃಢಪಟ್ಟಿದೆ. ಅಲ್ಲದೇ ಸುಮಾರು 49856 ಮಂದಿ ಸೋಂಕಿತರು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ.