ಉಪ್ಪಿಗಿಂತ ರುಚಿಯಿಲ್ಲ,ತಾಯಿಗಿಂತ ಬಂಧುವಿಲ್ಲ,‌ ತಾಯ್ನುಡಿಗಿಂತ ಭಾಷೆಯಿಲ್ಲ:ಡಾ.ಜಿ ಪರಮೇಶ್ವರ್…

1415
firstsuddi

ಬೆಂಗಳೂರು: ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಟ್ವಿಟ್ ಮೂಲಕ ಮಾತೃಭಾಷೆಯ ದಿನದ ಶುಭಾಶಯ ಕೋರಿದ್ದು , ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ,‌ ತಾಯ್ನುಡಿಗಿಂತ ಭಾಷೆಯಿಲ್ಲ. ಎಷ್ಟೇ ಭಾಷೆಗಳನ್ನು ಕಲಿತರೂ ನಮ್ಮ ಮನಸಿನಲಿ ಯೋಚಿಸುವ ಭಾಷೆ ಎಂದಿಗೂ ನಮ್ಮ ತಾಯ್ನುಡಿಯೇ. ರಾಜ್ಯದ ಕನ್ನಡಿಗರಿಗೆ, ತುಳುವರಿಗೆ, ಕೊಡವರಿಗೆ, ಬ್ಯಾರಿಗಳಿಗೆ, ಕೊಂಕಣಿಗರಿಗೆ ಹಾಗೂ ಇನ್ನೆಲ್ಲರಿಗೂ ವಿಶ್ವ ತಾಯ್ನುಡಿ ದಿನದ ಶುಭಾಶಯಗಳು ಎಂದು ಡಾ.ಜಿ ಪರಮೇಶ್ವರ್ ಅವರು ಟ್ವಿಟ್ ಮಾಡಿದ್ದಾರೆ.