ನವ ದಂಪತಿಗಳಿನ್ನು ಚಿಕ್ಕಮಗಳೂರು ಡಿ.ಸಿ, ಸಿ.ಇ.ಒ…

316
firstsuddi

 ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರು ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ದಾವಣಗೆರೆ ಜಿಲ್ಲಾಧಿಕಾರಿ ಡಾ. ಬಗಾಡಿ ಗೌತಮ್ ಅವರು ವರ್ಗಾವಣೆಗೊಂಡಿದ್ದಾರೆ. ದಾವಣೆಗೆರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಅಶ್ವತಿ ರವರು ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಗೆ ವಗಾವಣೆಯಾಗಿದ್ದು, ಸತ್ಯಭಾಮ ಅವರು ಚಾಮರಾಜನಗರಕ್ಕೆ ವರ್ಗಾವಣೆಗೊಂಡಿದ್ದಾರೆ. ಒಂದು ವಾರದ ಹಿಂದೆ ತಾನೆ ಕೇರಳ ಮೂಲದ ಐ.ಎ.ಎಸ್  ಅಧಿಕಾರಿ ಎಸ್ ಅಶ್ವತಿ ರವರು ಮತ್ತು ದಾವಣಗೆರೆ ಜಿಲ್ಲಾಧಿಕಾರಿ ಡಾ. ಬಗಾಡಿ ಗೌತಮ್  ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ ಒಂದೇ ಜಿಲ್ಲೆಗೆ ಸರ್ಕಾರ ವರ್ಗಾಯಿಸಿದೆ.