ಚಿಕ್ಕಮಗಳೂರು: ದೇಶದ ಭದ್ರತೆಯ ದೃಷ್ಠಿಯಿಂದ ಕೇಂದ್ರ ಸರ್ಕಾರ ಉಗ್ರಗಾಮಿಗಳನ್ನು ದಮನ ಮಾಡುವುದಕ್ಕಿಂತ ಮೊದಲು ಆಂತರಿಕ ಶತ್ರುಗಳನ್ನು ನಿಗ್ರಹಿಸಬೇಕು ಎಂದು ಮಾಜಿ ಶಾಸಕ ಐ.ಬಿ.ಶಂಕರ್ ಸಲಹೆ ಮಾಡಿದರು.
ನಗರದ ಭಾರತ ಸೇವಾದಳದ ಜಿಲ್ಲಾ ಕಛೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಕಾಶ್ಮೀರದಲ್ಲಿ ನಡೆದ ಉಗ್ರಗಾಮಿಗಳ ಕೃತ್ಯದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಶ್ಮೀರದಲ್ಲಿ ನಡೆದ ಉಗ್ರಗಾಮಿಗಳ ಕೃತ್ಯವನ್ನು ಹಾಗೂ ಅದನ್ನು ಸಮರ್ಥಿಸುತ್ತಿರುವವರನ್ನು ಕಟು ಶಬ್ದಗಳಲ್ಲಿ ಖಂಡಿಸಿದ ಅವರು ಕಾಶ್ಮೀರದಲ್ಲಿ ನಡೆದಿರುವುದು ಯೋಧರ ಹತ್ಯೆಯಲ್ಲ ಅದು ಕೊಲೆ ಇದು ಪಾಕಿಸ್ತಾನದ ಧೂರ್ತತನವನ್ನು ಎತ್ತಿ ತೋರಿಸುತ್ತದೆ ಎಂದರು.
ಉಗ್ರಗಾಮಿಗಳು ಮತ್ತು ಪಾಕಿಸ್ತಾನ ಸೇರಿದಂತೆ ಹೊರಗಿನ ಶತ್ರುಗಳನ್ನು ಎದುರಿಸುವುದು ಭಾರತೀಯ ಸೇನೆಗೆ ಸುಲಭದ ಕೆಲಸ ಆದರೆ ದೇಶದ ಒಳಗಿದ್ದುಕೊಂಡೇ ಭಯೋತ್ಪಾದಕರನ್ನು, ಪಾಕಿಸ್ತಾನವನ್ನು ಬೆಂಬಲಿಸುತ್ತಿರುವ ಆಂತರಿಕ ಶತ್ರುಗಳು ರಾಷ್ಟ್ರಕ್ಕೆ ಅತ್ಯಂತ ಅಪಾಯಕಾರಿ ಎಂದ ಅವರು ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಂತರಿಕ ಶತ್ರುಗಳನ್ನು ರಾಷ್ಟ್ರ ದ್ರೋಹಿಗಳೆಂದು ಪರಿಗಣಿಸಿ ಮೊದಲು ಅವರನ್ನು ಮಟ್ಟಹಾಕಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ನಡೆದ ಯೋಧರ ಹತ್ಯೆಗೆ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಸರಿಯಾದ ರೀತಿಯಲ್ಲಿ ಪ್ರತ್ಯುತ್ತರ ನೀಡಬೇಕು ಇನ್ನು ಮುಂದೆ ಇಂತಹ ದುಷ್ಕøತ್ಯಕ್ಕೆ ಮುಂದಾಗದಂತೆ ಉಗ್ರಗಾಮಿಗಳಿಗೆ ಮತ್ತು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಹೆಚ್.ನರೇಂದ್ರ ಪೈ ಮಾತನಾಡಿ ಹಗಲಿರುಳೆನ್ನದೇ ಮನೆಮಠ ಮತ್ತು ತಮ್ಮ ಪ್ರಾಣದ ಹಂಗನ್ನು ತೊರೆದು ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲೂ ದೇಶವನ್ನು ರಕ್ಷಿಸುತ್ತಿರುವ ಯೋಧರ ಪರ ಇಡೀ ರಾಷ್ಟ್ರದ ಜನತೆ ನಿಲ್ಲಬೇಕು ಎಂದು ಸಲಹೆ ಮಾಡಿದರು.
ಹುತಾತ್ಮ ಯೋಧರ ಭಾವಚಿತ್ರದ ಮುಂದೆ ಗಣ್ಯರು ದೀಪ ಬೆಳಗಿಸಿ ಪುಷ್ಪಾ ನಮನ ಸಲ್ಲಿಸಿ ಸೈನಿಕರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಿದರು.
ಭಾರತ ಸೇವಾದಳದ ಜಿಲ್ಲಾ ಉಪಾದ್ಯಕ್ಷ ಕಲ್ಮರುಡಪ್ಪ, ಖಜಾಂಚಿ ಜಗಧೀಶಾಚಾರ್, ತಾಲ್ಲೂಕು ಅಧ್ಯಕ್ಷ ಬಿ.ಆರ್.ಜಗಧೀಶ್, ಜಿಲ್ಲಾ ಸಂಘಟಕ ಚಂದ್ರಕಾಂತ್, ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್, ಶಿಕ್ಷಕಿ ಸುಮಾರಾಣಿ, ಶಾಂತಕುಮಾರ್, ತಿಮ್ಮೇಗೌಡ ಹಾಜರಿದ್ದರು.
Home ಸ್ಥಳಿಯ ಸುದ್ದಿ ದೇಶದ ಭದ್ರತೆಯ ದೃಷ್ಠಿಯಿಂದ ಕೇಂದ್ರ ಸರ್ಕಾರ ಉಗ್ರಗಾಮಿಗಳನ್ನು ದಮನ ಮಾಡುವುದಕ್ಕಿಂತ ಮೊದಲು ಆಂತರಿಕ ಶತ್ರುಗಳನ್ನು ನಿಗ್ರಹಿಸಬೇಕು:...










