ದೇವೇಗೌಡರ ಎದುರೇ ಕಣ್ಣೀರಿಟ್ಟ  ಉಪ ಸಭಾಪತಿ ಎಸ್.ಎಲ್ ಧರ್ಮೇಗೌಡ…

300
firstsuddi

ಚಿಕ್ಕಮಗಳೂರು : ಕಡೂರಿನಲ್ಲಿ ನಡೆಯುತ್ತಿರುವ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ವಿಧಾನಪರಿಷತ್ ಉಪ ಸಭಾಪತಿಗಳಾದ ಎಸ್.ಎಲ್ ಧರ್ಮೇಗೌಡ ಅವರು ಮಾಜಿ ಪ್ರಧಾನಿ ದೇವೇಗೌಡರ ಎದುರೇ ಕಣ್ಣೀರು ಹಾಕಿರುವ ಘಟನೆ ಇಂದು ನಡೆದಿದ್ದು, ಮುಂದಿನ ಚುನಾವಣೆಗೆ  ವೈ.ಎಸ್.ವಿ ದತ್ತರವರಿಗೆ ಟಿಕೆಟ್ ನೀಡಲು ದೇವೇಗೌಡ ಅವರು ಪ್ರಸ್ತಾಪಿಸಿದ ಸಂದರ್ಭದಲ್ಲಿ ಧರ್ಮೇಗೌಡ ಅವರು ಭಾವುಕರಾಗಿದ್ದಾರೆ. ತಮ್ಮ ಕುಟುಂಬಕ್ಕೆ ರಾಜಕೀಯ ಜನ್ಮ ನೀಡಿದವರು ದೇವೇಗೌಡರು. ನಾವು ರಾಜಕೀಯವಾಗಿ ನೆಲಕಚ್ಚಿದ ವೇಳೆ ನಮಗೆ ಅನ್ನ ನೀಡಿದವರು ದೇವೇಗೌಡರು ಎಂದು ವೇದಿಕೆಯಲ್ಲಿ ದೇವೇಗೌಡ, ರೇವಣ್ಣ, ಪ್ರಜ್ವಲ್ ರೇವಣ್ಣ ಎದುರೇ ಧರ್ಮೇಗೌಡ ಅವರು ಕಣ್ಣೀರಿಟ್ಟು ಭಾವುಕರಾಗಿದ್ದು, ಈ ಸಂದರ್ಭದಲ್ಲಿ ವೈ.ಎಸ್.ವಿ  ದತ್ತ ಅವರು ಕಣ್ಣೀರೊರೆಸಿದ್ದಾರೆ.