ಚಿಕ್ಕಮಗಳೂರು : ಮದುವೆ ಮಾಡಿಸುವ ನೆಪದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಬಂಧನ…

619
firstsuddi

ಚಿಕ್ಕಮಗಳೂರು : ಮದುವೆ ಮಾಡಿಸುವ ನೆಪದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಬಂಧನವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.ಮಂಡ್ಯ ಮೂಲದ ರಾಮಕೃಷ್ಣ(52) ಬಂಧನವಾಗಿರುವ ವ್ಯಕ್ತಿ . ಈತ    ಪತ್ರಿಕೆಗಳಲ್ಲಿ ಜಾಹಿರಾತು ನೀಡಿ ಮಹಿಳೆಯರಿಗೆ ವಂಚಿಸುತ್ತಿದ್ದು,  ಸರ್ಕಾರಿ ನೌಕರಿಯ ಮಹಿಳೆಯರನ್ನೇ ಇವನು ಟಾರ್ಗೇಟ್ ಮಾಡುತ್ತಿದ್ದ.  ಎರಡನೇ ಮದುವೆ ಮಾಡಿಸುವ ನೆಪದಲ್ಲಿ ವರನನ್ನು ಹುಡುಕಿ ಬಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ ಮಹಿಳೆಯರಿಂದ ಹಣ, ಬಂಗಾರ ದೋಚುತ್ತಿದ್ದ. ಚಿಕ್ಕಮಗಳೂರು ಮೂಲದ ಶಿಕ್ಷಕಿಯೊಬ್ಬರಿಗೆ ಮೋಸ ಮಾಡಿ ರಾಮಕೃಷ್ಣ ಸಿಕ್ಕಿ ಬಿದ್ದಿದ್ದಾನೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.