ಹಾಸನ: ಜಿಲ್ಲೆಯ ಸಕಲೇಶಪುರದ ಕಡಗರವಳ್ಳಿ ಸಮೀಪ ಕೆಸರಿನಲ್ಲಿ ಸಿಲುಕಿ ಅಪಾಯದಲ್ಲಿದ್ದ ಕಾಡಾನೆಯನ್ನು ಕಳೆದ ಎರಡು ತಿಂಗಳ ಹಿಂದೆ ರಕ್ಷಿಸಲಾಗಿತ್ತು. ಆದರೆ ಆ ಆನೆ ಇಂದು ಮೃತಪಟ್ಟಿದೆ. ಕೆಸರಿನಲ್ಲಿ ಆನೆ ಸಿಲುಕಿ ಹೊರಬರಲಾರದೆ ಇದ್ದಿದ್ದರಿಂದ ಅರಣ್ಯ ಸಿಬ್ಬಂದಿ ಜೆಸಿಬಿ ಮೂಲಕ ರಕ್ಷಿಸಿದ್ದರು. ಆದರೆ ಆನೆಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯದ ಕಾರಣ ಆನೆ ಮೃತಪಟ್ಟಿದೆ. ಆನೆಯ 6 ತಿಂಗಳ ಮರಿಯ ರೋದನ ಮುಗಿಲು ಮುಟ್ಟಿದೆ.










