ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಜೀನ್ಸ್ ಹೆಚ್ಚಾಗಿ ತೊಡುತ್ತಿದ್ದಾರೆ… ಜೀನ್ಸ್ ಧರಿಸೋದ್ರಿಂದ ಏನೆಲ್ಲಾ ಪ್ರಾಬ್ಲಂ ಆಗುತ್ತೆ ಗೊತ್ತಾ.?

5976

ಆಧುನಿಕ ಭಾರತದಲ್ಲಿ ಚೂಡಿದಾರ, ಲಂಗ-ದವಣಿಯಂತಹಾ ಮಹಿಳೆಯರ ಉಡುಗೆ-ತೊಡುಗೆಗಳು ಬದಲಾಗ್ತಾ ಹೋಗ್ತಿವೆ. ಮಾಡ್ರನ್ ವಲ್ಡ್, ಫ್ಯಾಷನ್, ಅಂತೆಲ್ಲಾ ಟ್ರೆಂಡ್ ಹೆಸರಲ್ಲಿ ಹತ್ತಾರು ಶೈಲಿಯ ವಸ್ತ್ರಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವುಗಳಲ್ಲಿ ಪ್ಯಾರಲಲ್, ಬೂಟ್ ಕಟ್, ಸ್ಕಿನ್ ಟೈಟ್ ಜೀನ್ಸ್‍ಗಳು ಹೆಚ್ಚು ಆಕರ್ಷಿತವಾಗಿದ್ವು. ಆದರೆ, ಈ ಜೀನ್ಸ್ ಮಹಿಳೆಯರಿಗೆ ಎಷ್ಟು ಒಳ್ಳೆದು-ಕೆಟ್ಟದ್ದು ಅನ್ನೋದು ಬಹುಮುಖ್ಯ. ಯಾಕಂದ್ರೆ, ಇಂಗ್ಲೆಂಡ್ ಮೂಲದ ಸಂಶೋಧಕರ ಪ್ರಕಾರ ಮಹಿಳೆಯರಿಗೆ ಈ ಜೀನ್ಸ್ ಬಟ್ಟೆಗಳೂ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಲಿದೆ ಎಂದು ಹೇಳಿದೆ. ಫ್ಯಾಷನ್ ಹೆಸರಲ್ಲಿ ದೇಹಕ್ಕೆ ಅಂಟಿಕೊಂಡಂತಿರೋ ಟೈಟ್ ಜೀನ್ಸ್ ವಸ್ತ್ರಗಳ ಮೊರೆ ಹೋಗಿದ್ದಾರೆ. ಮಹಿಳೆಯರು ಬಿಗಿಯಾಗಿ ಈ ರೀತಿಯ ಪ್ಯಾಂಟ್ ಹಾಗೂ ಬಟ್ಟೆಗಳನ್ನ ಧರಿಸೋದ್ರಿಂದ ಕ್ರಮೇಣ ಮಹಿಳೆಯರು ಅನಾರೋಗ್ಯಕ್ಕೆ ತುತ್ತಾಗ್ತಾರೆಂದು ಬ್ರಿಟಿಷ್ ಕಿರೋ ಪ್ರಾಕ್ಟೀಕ್ ಅಸೋಸಿಯೇಷನ್ ಸಂಶೋಧಕರು ಕೂಡ ಸ್ಪಷ್ಟಪಡಿಸಿದ್ದಾರೆ.

ಈ ಒಂದು ಪರೀಕ್ಷೆಗೆ ನೂರಕ್ಕೂ ಅಧಿಕ ಮಹಿಳೆಯರನ್ನ ಒಳಪಡಿಸಲಾಗಿತ್ತು. ಸಂಶೋಧನೆ ವೇಳೆ ಆ ಮಹಿಳೆಯರು ಬಿಗಿಯಾದ ಬಟ್ಟೆಗಳನ್ನ ಧರಿಸುವುದರಿಂದ ದೇಹದ ಮೇಲಾಗುವ ಪರಿಣಾಮವನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸಂಶೋಧನೆ ನಡೆಸಿದ ಮಹಿಳೆಯರ ಪೈಕಿ ಶೇಕಡ 75 ರಷ್ಟು ಮಹಿಳೆಯರಿಗೆ ಸೊಂಟ-ಮಂಡಿ ನೋವು ಕಾಣಿಸಿಕೊಂಡಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ನಾನು ಕುಳ್ಳಿ ಎತ್ತರ ಕಾಣಲೆಂದು ಹೀಲ್ಡ್ಸ್ ಸ್ಲಿಪರ್ ಹಾಕೋ ಮಹಿಳೆಯರು ಎಚ್ಚರದಿಂದಿರಬೇಕು. ಹೀಲ್ಡ್ ಚಪ್ಪಲಿ ಧರಿಸೋರ ಬಗ್ಗೆಯೂ ಅಧ್ಯಯನ ನಡೆಸಿರೋ ತಂಡ ಮಹಿಳೆಯರಿಗೆ ಪಾದ, ಕಾಲಿನ ಸ್ನಾಯುಗಳಿಗೆ ಹೆಚ್ಚಿನ ಒತ್ತಡ ಬೀಳಿಲಿದ್ದು ಇದರಿಂದಲೂ ಕೂಡ ಮಹಿಳೆಯರು ಹಲವು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.