ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲಾದ್ಯಂತ ಇರೋ ಹೋಂ ಸ್ಟೆ, ರೆಸಾರ್ಟ್, ಲಾಡ್ಜ್‍ಗಳಲ್ಲಿ ಒಂದೇ ಒಂದು ರೂಂ ಕೂಡ ಖಾಲಿ ಇಲ್ಲ. ಒಂದೋ ಎರಡೋ ರೂಂ ಇದ್ದರೂ ಕೂಡ ಅವುಗಳಿಗೆ ಬಂಗಾರದ ಬೆಲೆ ಬಂದಿದೆ. ಯಾಕಂದ್ರೆ, ಇಯರ್ ಎಂಡ್ ಹಾಗೂ ಡಿಸೆಂಬರ್ 31 ಭಾನುವಾರ ಬಂದಿರೋದು ಪ್ರವಾಸಿಗರಿಗೆ ಹಾಗೂ ಹೋಂ ಸ್ಟೆ, ಲಾಡ್ಜ್ ಮಾಲೀಕರಿಗೂ ವರದಾನವಾಗಿದೆ. ಪ್ರವಾಸಿಗರು ಸಾಗರೋಪಾದಿಯಲ್ಲಿ ಬರ್ತಿರೋದ್ರಿಂದ ಕಾಫಿನಾಡಿನಾದ್ಯಂತ ಇರೋ ಹೋಂ ಸ್ಟೇ, ಲಾಡ್ಜ್‍ಗಳು ಹದಿನೈದು ದಿನ, ತಿಂಗಳ ಮುಂಚೆಯೇ ಬುಕ್ ಆಗಿವೆ. ಎಷ್ಟೋ ಪ್ರವಾಸಿಗರು ಚಿಕ್ಕಮಗಳೂರಿಗೆ ಬಂದು ತಂಗಲು ಜಾಗವಿಲ್ಲದೆ ಬೇಲೂರು, ಹಾಸನದಲ್ಲಿ ಉಳಿದುಕೊಂಡಿರೋ ಉದಾಹರಣೆಗಳಿವೆ.
ಮೂಡಿಗೆರೆ, ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರ ಭಾಗದ ಹೋಂ ಸ್ಟೇ ಹಾಗೂ ರೆಸಾರ್ಟ್‍ಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಯಾಕಂದ್ರೆ, ಪ್ರವಾಸಿಗರಿಗೆ ಮಲೆನಾಡು ಭಾಗದಲ್ಲಿ ಮಾಡೋ ವಿಶೇಷ ಖಾದ್ಯಗಳಿಗಾಗಿ ಮಲೆನಾಡಿನತ್ತ ಮುಖ ಮಾಡಿದ್ದಾರೆ. ಎಂ.ಎನ್.ಸಿ. ಕಂಪನಿಗಳಿಗೆ ಶನಿವಾರ-ಭಾನುವಾರ ರಜೆ ಇರೋದ್ರಿಂದ ಪ್ರವಾಸಿಗರು ನ್ಯೂ ಇಯರ್ ಸೆಲಬ್ರೇಷನ್‍ಗೆ ಕಾಫಿನಾಡನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಭಾನುವಾರ ರಾತ್ರಿ ನ್ಯೂ ಇಯರ್ ಸೆಲೆಬ್ರೇಷನ್ ಮಾಡ್ಕೊಂಡು, ಸೋಮವಾರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಎಂಜಾಯ್ ಮಾಡ್ಕೊಂಡು ತಮ್ಮ ಊರುಗಳಿಗೆ ಹಿಂದಿರುಗಲಿದ್ದಾರೆ. ಒಟ್ಟಿನಲ್ಲಿ, ಚಿಕ್ಕಮಗಳೂರು ಜಿಲ್ಲಾದ್ಯಂತ ಶುಕ್ರವಾರ ಸಂಜೆಯಿಂದ ಸೋಮವಾರದ ಸಂಜೆವರ್ಗೂ ಅಕ್ಷರಶಃ ಪ್ರವಾಸಿಗರ ಜಾತ್ರೆ ಏರ್ಪಟ್ಟಿರುತ್ತೆ.
ಇದೇ ವೇಳೆ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಬಂದಂತಹಾ ಪ್ರವಾಸಿಗ್ರು ಇಲ್ಲಿನ ಸೌಂದರ್ಯವನ್ನ ಸವಿದು ಸಂತೋಷ ಪಡಲಿ. ಬಾಟಲಿ ಹೊಡೆಯೋದು, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಕೋದು ಸೇರಿದಂತೆ ಪ್ರಕೃತಿ ಸೌಂದರ್ಯವನ್ನ ಹಾಳುಮಾಡುವಂತಹಾ ಕೆಲಸ ಮಾಡಬಾರದೆಂದು ಮನವಿ ಮಾಡ್ಕೊಂಡಿದೆ.










