ಕರ್ನಾಟಕ ಕೋಮು ಸೌಹಾರ್ಧ ವೇಧಿಕೆಗೆ 15 ವರ್ಷದ ಸಂಭ್ರಮ : ಚಿಕ್ಕಮಗಳೂರಲ್ಲಿ ಅದ್ಧೂರಿ ಕಾರ್ಯಕ್ರಮ

446

ಚಿಕ್ಕಮಗಳೂರು : ಕೋಮು ಸೌಹಾರ್ಧ ವೇದಿಕೆ ರಾಜ್ಯದಲ್ಲಿ ಸೌಹಾರ್ಧತೆ ಸಾಧಿಸಲು ಕಳೆದ ಹದಿನೈದು ವರ್ಷಗಳಿಂದ ಪ್ರಯತ್ನಿಸಿ ಯಶಸ್ವಿಯಾಗಿದೆ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವಾಣಿ ಪೆರಿಯೋಡಿ ಹೇಳಿದರು. ಅವರು ಗುರುವಾರ ಸಂಜೆ ಕೋಮು ಸೌಹಾರ್ದ ವೇದಿಕೆಯ ಒಂದುವರೆ ದಶಕಗಳ ಸಮ್ಮಿಲನ ಸಂಘರ್ಷ ಮತ್ತು ಹಿಂದಣ ನೋಟ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೊನ್ನಾವರದಲ್ಲಿ ಕೋಮು ಸೌಹಾರ್ಧತೆ ಕದಡುವ ಯತ್ನ ನಡೆಯುತ್ತಿದ್ದ ಸಮಯದಲ್ಲಿ ಕೋಮು ದಳ್ಳುರಿ ಯತ್ನವನ್ನು ತಡೆಯಲು ನಾವು ಸಾಕಷ್ಟು ಪ್ರಯತ್ನಿಸಿದ್ದೇವೆ ಎಂದ ಅವರು, ನಮ್ಮ ಮಕ್ಕಳಲ್ಲಿ ಕೋಮು ಸೌಹಾರ್ಧತೆ ಸಾಧಿಸುವ ಮನೋಭಾವ ಬರಬೇಕು. ದ್ವೇಷದ ಭಾsಷೆಯನ್ನು ಮರೆತು ಪ್ರೀತಿಯ ಸಮಾಜ ಕಟ್ಟುವ ಚೈತನ್ಯ ನಮಗೆಲ್ಲಾ ಬರಲಿ ಎಂದು ಹಾರೈಸಿದರು.

ವಕೀಲರಾದ ದಾವಣಗೆರೆಯ ಅನೀಸ್ ಪಾಷಾ ಮಾತನಾಡಿ, ಬಾಬಾಬುಡಾನ್ ಗಿರಿಯನ್ನು ದಕ್ಷಿಣ ಭಾರತದ ಅಯೋದ್ಯೆ ಮಾಡಲು ಬಿಡುವುದಿಲ್ಲ ಎಂದು ವೇದಿಕೆ ಹೋರಾಟ ನಡೆಸಿರುವುದು ಅತ್ಯತ್ತಮ ಬೆಳವಣಿಗೆಯನ್ನು ಕಂಡಿದೆ. ಮಂಗಳೂರು ಹೋಂಸ್ಟೇ ದಾಳಿ ಸಮಯದಲ್ಲಿ, ಸಿಂದಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿ ಮುಸ್ಲೀಮರ ಮೇಲೆ ಎತ್ತಿ ಕಟ್ಟಿದ್ದು ಸಹಿತ ಅನೇಕ ಕಡೆ ಕೋಮು ಸೌಹಾರ್ಧ ಕದಡುವ ಪ್ರಯತ್ನಕ್ಕೆ ವೇದಿಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿ ಹೋರಾಟ ರೂಪಿಸಿ ಯಶಸ್ವಿಯಾಗಿದೆ ಎಂದು ಹಿಂದಿನ ಹೆಜ್ಜೆಗಳನ್ನು ಮೆಲುಕು ಹಾಕಿದರು.

ಹಿಂದೆ ಪುಡಾರಿಗಳು, ಪುಂಡರು ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನವನ್ನು ಮಾಡುತ್ತಿದ್ದರು. ಆದರೆ ಈಗ ಚುನಾಯಿತ ಪ್ರತಿನಿಧಿಗಳು, ಸಂಸದರು, ಶಾಸಕರು, ಪ್ರಮಾಣ ವಚನ ಸ್ವೀಕರಿಸಿದ ಪ್ರಜಾ ಪ್ರತಿನಿಧಿಗಳು ಸಂವಿಧಾನವನ್ನು ಬದಲಿಸುವ ಹೇಳಿಕೆ ನೀಡುತ್ತಿದ್ದಾರೆ. ಮೂಗು ಕತ್ತರಿಸಲು ಹಾಗೂ ಕೊಲೆ ಮಾಡುವಂತೆ ಪ್ರಚೀಧಿಸುವುದು ನಡೆಯುತ್ತಿದೆ ಎಂದ ಅವರು, ಇತ್ತೀಚೆಗಿನ ಬೆಳವಣಿಗೆ ಕಂಡರೆ ಕ್ರಿಮಿನಲ್‍ಗಳು ಒಂದೆರಡು ದಿನಗಳಲ್ಲಿ ಜಾಮೀನು ಹೊರ ಬರುತ್ತಿರುವುದು ಆತಂಕ ತರುವಂತಾದ್ದು ಎಂದರು. ವೆಲ್‍ಫೇರ್ ಪಾರ್ಟಿಆಫ್ ಇಂಡಿಯಾದ ತಾಹೀರ್ ಹುಸೈನ್ ಮಾತನಾಡಿದರು. ಭದ್ರಾವತಿಯ ನಾಗರಾಜು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭದ್ರಾವತಿಯ ಜಿ.ರಾಜು ಸ್ವಾಗತಿಸಿ, ನಿರೂಪಿಸಿದರು.